ಕರಾವಳಿವೈರಲ್ ನ್ಯೂಸ್

ಕಾರವಾರದಲ್ಲಿ ಬಲೆಗೆ ಬಿತ್ತು ದೇಶದ ಅತಿದೊಡ್ಡ ಬಂಗುಡೆ ಮೀನು..!, ಬೃಹತ್‌ ಗಾತ್ರದ ಬಂಗುಡೆ ಮೀನಿನ ಉದ್ದ ಎಷ್ಟಿದೆ ಗೊತ್ತಾ..?

197

ನ್ಯೂಸ್‌ ನಾಟೌಟ್‌: ನಾಗರಪಂಚಮಿ ಮುಗಿಯುತ್ತಿದ್ದಂತೆ ಕಡಲಿಗಿಳಿದ ಆಳ ಸಮುದ್ರ ಮೀನುಗಾರರಿಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಅಪರೂಪದ ಅತೀ ಉದ್ದ ಮತ್ತು ತೂಕದ ಬಂಗುಡೆ ಮೀನು ಬಲೆಗೆ ಬಿದ್ದಿದೆ. ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸಂಬಂಧಪಟ್ಟ ಪಾತಿ ದೋಣಿಯ ಬೀಡು ಬಲೆಗೆ ಬಿದ್ದ ಮೀನುಗಳಲ್ಲಿ ದೊಡ್ಡ ಗಾತ್ರದ ಬಂಗಡೆ ಮೀನು ಲಭಿಸಿದೆ. ಇದನ್ನು ಕಂಡ ಮೀನುಗಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದೀಗ ಬಲೆಗೆ ಬಿದ್ದ ಬಂಗುಡೆ ಮೀನು ಸುಮಾರು 48 ಸೆ.ಮೀ. ಉದ್ದ ಇದ್ದು, ಸುಮಾರು 12 ಸೆ.ಮೀ. ಅಗಲವಿದೆ. ಆದರೆ ಭಾರತದಲ್ಲಿ ಇದುವರೆಗೆ ದೊರೆತ ಅತಿ ದೊಡ್ಡ ಬಂಗಡೆ ಮೀನು ಎಂಬ ದಾಖಲೆ ಹೊಂದಿರುವ ಗಂಡು ಬಂಗಡೆ 36 ಸೆ.ಮೀ. ಉದ್ದ ಹಾಗೂ ಹೆಣ್ಣು ಬಂಗಡೆ 42 ಸೆ.ಮೀ. ಉದ್ದವಿದ್ದು , 1 ಕೆ.ಜಿ. ತೂಕವಿದೆ ಎಂದು ತಿಳಿದುಬಂದಿದೆ.


ದೇಶದಲ್ಲೇ ಇದುವರೆಗೆ ಸಿಕ್ಕಿದ ಬಂಗಡೆಗಳಲ್ಲಿ ಕಾರವಾರದಲ್ಲಿ ಮೀನುಗಾರರ ಬಲೆಗೆ ಬಿದ್ದ ದೊಡ್ಡ ಗಾತ್ರದ ಬಂಗಡೆ ಇದಾಗಿದ್ದು, ಇದನ್ನು ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಾರ್ವಜನಿಕರ ವೀಕ್ಷಣೆಗಾಗಿ ಫಾರ್ಮಾಲಿನ್ ಹಾಕಿ ಕಾರವಾರದ ವಿಜ್ಞಾನ ಕೇಂದ್ರದಲ್ಲಿ ಸಂರಕ್ಷಿಸಿಡಲಾಗುತ್ತದೆ.

ಕರಾವಳಿ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಬಂಗುಡೆ ಮೀನು ರುಚಿ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಇದರಿಂದಾಗಿ ಈ ಮೀನಿಗೆ ಭಾರಿ ಬೇಡಿಕೆಯಿದೆ. ಮೀನುಗಾರರಿಗೂ ಜಾಸ್ತಿ ಬಂಗುಡೆ ಮೀನುಗಳು ಬಲೆಗೆ ಬಿದ್ದರೆ ಹೆಚ್ಚು ಲಾಭವಾಗುತ್ತದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು. ಈ ಕಾರಣದಿಂದಾಗಿ ಬಂಗುಡೆ ಮೀನು ತುಂಬಾ ಜನಪ್ರಿಯವಾಗಿದೆ.

See also  ಗೂನಡ್ಕ ಕಾಂಗ್ರೆಸ್ ಕಾರ್ಯಕರ್ತರ ಸಭೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget