ಬೆಂಗಳೂರು

ಬಿಗ್‌ ಬಾಸ್‌ ಮನೆಯಲ್ಲಿ ಪತ್ನಿ ಕೈಯಿಂದ ಒದೆ ತಿಂದ ತುಕಾಲಿ..!ತುಕಾಲಿ ಅವತಾರಕ್ಕೆ ಬಿದ್ದು ಬಿದ್ದು ನಗಾಡಿದ ಸ್ಪರ್ಧಿಗಳು;ವೈರಲ್ ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್ : ಬಿಗ್‌ ಬಾಸ್‌ ಮನೆಗೆ ವೀಕೆಂಡ್‌ನಲ್ಲಿ ಹೊಸ ಅತಿಥಿಗಳು ಬಂದಿದ್ದರು.ನಟಿ ಶೃತಿ,ಶುಭಾ ಪೂಂಜಾ ಸೇರಿದಂತೆ ಶೈನ್ ಶೆಟ್ಟಿ ಆಗಮಿಸಿದ್ರು.ಕಿಚ್ಚ ಸುದೀಪ್ ಇಲ್ಲದೆ ಈ ವಾರಾಂತ್ಯ ಕಳೆದು ಹೊಸ ವಾರ ಶುರುವಾಗಿದೆ.ಇದೀಗ ಸರ್ಪ್ರೈಸ್ ಎಂಬಂತೆ ಸದಸ್ಯರ ಕುಟುಂಬದವರು ಮನೆಯೊಳಗೆ ಬಂದಿದ್ದಾರೆ.ತುಕಾಲಿ ಅವರ ಪತ್ನಿ ಕೂಡ ಮನೆಗೆ ಬಂದಿದ್ದು,ಜೋಡಿ ಇಡೀ ಮನೆಯನ್ನು ನಗೆಗಡಲಿನಲ್ಲಿ ತೇಲಿಸಿತು.ಇದೀಗ ಜಿಯೋ ಸಿನಿಮಾ ಪ್ರೋಮೊ ಹಂಚಿಕೊಂಡಿದ್ದು, ಮನೆಯ ಸ್ಪರ್ಧಿಗಳು ಮಾತ್ರವಲ್ಲ, ವೀಕ್ಷಕರು ಕೂಡಾ ಜೋಡಿಯ ಅವತಾರಕ್ಕೆ ಬಿದ್ದು ಬಿದ್ದು ನಕ್ಕಿದ್ದಾರೆ.

ಉಳಿದ ಸದಸ್ಯರ ಕುಟುಂಬದ ಜತೆ ತುಕಾಲಿ ಅವರು ʻಮನೆಯಿಂದ ಹೊರ ಹೋದ ಮೇಲೆ ನನ್ನ ಹೆಂಡತಿಗೆ ಬರುವುದು ಬೇಡ ಅಂದು ಬಿಡಿʼ ಎಂದಿದ್ದಾರೆ. ಅಷ್ಟೊತ್ತಿಗೆ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟರು ತುಕಾಲಿ ಪತ್ನಿ. ಬಂದ ಕೂಡಲೇ ಕೋಲು ಹಿಡಿದು ತುಕಾಲಿಗೆ ಚೆನ್ನಾಗಿ ಬಾರಿಸಿದ್ದಾರೆ. ತುಕಾಲಿ ಕೂಡ ʻʻಬಿಗ್‌ ಬಾಸ್‌ ನನ್ನ ಹೆಂಡತಿಯನ್ನು ಯಾಕೆ ಇಲ್ಲಿ ಕರೆಸಿದ್ರಿʼʼ ಎಂದು ಜೋರಾಗಿ ಕೂಗಿ ಹೆಂಡತಿಯ ಪೆಟ್ಟನ್ನು ತಪ್ಪಿಸಿಕೊಳ್ಳಲು ಮನೆತುಂಬ ಓಡಾಡಿದ್ದಾರೆ.ಈ ದೃಶ್ಯ ಇದೀಗ ಭಾರಿ ವೈರಲ್ಲಾಗುತ್ತಿದೆ.

ಸ್ಪರ್ಧಿಗಳ ಮುಂದೆ ತುಕಾಲಿ ಅವರು ʻʻಊರಲ್ಲಿ ಎಮ್ಮೆ ಕಾಯ್ಕೊಂಡು ಇದ್ದವಳನ್ನು ಬೆಂಗಳೂರಿಗೆ ಬಿಟ್ಟೆʼʼ ಎಂದಿದ್ದಾರೆ. ಅದಕ್ಕೆ ಪತ್ನಿ ಕೂಡ ʻʻನಾನೇನೋ ಊರಲ್ಲಿ ಎಮ್ಮೆ ಕಾಯುತ್ತಿದ್ದೆ. ಇವರೇನು ಮೈಸೂರಲ್ಲಿ ಇರುವ ಅರ್ಜುನ್‌ನನ್ನು ಕಾಯ್ತಾ ಇದ್ನಾ? ಎಮ್ಮೆಗೆ ಒಳ್ಳೆ ಜೋಡಿ ಸಿಕ್ಕಿತ್ತಲ್ಲ ಎಂದು ಮದುವೆಯಾದೆ. ಎಲ್ಲರಿಗೂ ಒಳ್ಳೆಯವರಿಗೆ ಜೀವನ ಕೊಟ್ಟರೆ. ಇಂಥವರಿಗೆ ಯಾರು ಜೀವನ ಕೊಡ್ತಾರೆ? ಅದಕ್ಕಾಗಿ ನಾನೇ ಜೀವನ ಕೊಟ್ಟೆʼʼ ಎಂದು ತಮಾಷೆಯಾಗಿ ತುಕಾಲಿ ಅವರ ಕಾಲೆಳೆದಿದ್ದಾರೆ.

ನಮ್ರತಾ ಅವರ ತಾಯಿ, ವರ್ತೂರ್ ಅವರ ಅಮ್ಮ ಬಿಗ್ ಬಾಸ್ ಮುಖ್ಯದ್ವಾರದಿಂದ ಬಂದಿರುವುದು ಪ್ರೋಮೊದಲ್ಲಿ ಜಾಹೀರಾಗಿದೆ. ಮತ್ತೆ ಯಾವೆಲ್ಲ ಸದಸ್ಯರ ಮನೆಯವರು ಬಿಗ್ ಬಾಸ್ ಮನೆಯೊಳಗೆ ಭೇಟಿ ಕೊಟ್ಟಿದ್ದಾರೆ? ಮನೆಯವರನ್ನು ನೋಡಿ ಸದಸ್ಯರ ರಿಯಾಕ್ಷನ್ ಹೇಗಿತ್ತು? ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

https://www.instagram.com/p/C1Tw3fMLeNI/?utm_source=ig_embed&utm_campaign=embed_video_watch_again

https://www.instagram.com/p/C1Tw3fMLeNI/?utm_source=ig_embed&utm_campaign=embed_video_watch_again

Related posts

ಖ್ಯಾತ ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!

ಆರ್ಕಿಟೆಕ್ಟ್ ಕೆಲಸ ತೊರೆದು ವಡಾ ಪಾವ್ ಮಾರಾಟ ಮಾಡಿದ ಯುವಕ..!ಈ ನಿರ್ಧಾರಕ್ಕೆ ಬರಲು ಕಾರಣವೇನು?

ಶಿವರಾಜ್ ​ಕುಮಾರ್ ಗೆ ದೊಡ್ಡ ಆಪರೇಷನ್ ಆಗಿದೆ ಹಾಗಾಗಿ ನಾನೂ ಜೊತೆ ಹೋಗಬೇಕಾಯ್ತು ಎಂದ ಮಧು ಬಂಗಾರಪ್ಪ..! ನಟನಿಗೆ 6 ಸರ್ಜರಿ, 190 ಹೊಲಿಗೆ ಹಾಕಲಾಗಿದೆ ಎಂದ ಸಚಿವ..!