ಕರಾವಳಿ

ಅಮ್ಮನಿಗೆ ಬಳೆ ಮಾಡಿಸ್ತೀನಿ,ತಂಗಿಗೆ ಮದುವೆ ಮಾಡಿಸ್ತೀನಿ,ತಂದೆ ಕೈಯಿಂದಲೇ ಡ್ರೋನ್ ಹಾರಿಸ್ತೀನಿ: ಬಿಗ್‌ಬಾಸ್‌ ಮನೆಯಲ್ಲಿ ಭಾವುಕರಾಗಿ ಡ್ರೋನ್ ಪ್ರತಾಪ್ ಹೀಗಂದಿದ್ಯಾಕೆ?

197

ನ್ಯೂಸ್ ನಾಟೌಟ್ :ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ದಿನದಿಂದ ದಿನಕ್ಕೆ ಭಾರಿ ಕುತೂಹಲಕ್ಕೆ ಪಾತ್ರವಾಗುತ್ತಿದೆ.ಬಿಗ್ ಬಾಸ್‌ಗೂ ಬರುವ ಮುನ್ನ ಡ್ರೋನ್‌ ಪ್ರತಾಪ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಯ ಮಾತುಗಳು ಕೇಳಿ ಬಂದಿದ್ದವು.ಆದರೀಗ ಬಿಗ್ ಬಾಸ್ ಮನೆಯಲ್ಲಿ ಡ್ರೋಪ್ ಪ್ರತಾಪೇ ಹೈಲೈಟ್ ಆಗುತ್ತಿದ್ದಾರೆ.ಕಳೆದ ಮೂರು ವರ್ಷದಿಂದ ವಿವಾದದಲ್ಲಿ ಸಿಲುಕಿದ ನಂತರ ಕುಟುಂಬಸ್ಥರಿಂದ ದೂರ ಉಳಿದರು ಪ್ರತಾಪ್‌.ಮಾತ್ರವಲ್ಲ ತಂದೆಯ ಫೋನ್‌ ನಂಬರ್‌ನ್ನೂ ಬ್ಲಾಕ್ ಮಾಡಿದ್ದರು.

ಮೊನ್ನೆಯಷ್ಟೇ ಬರೋಬ್ಬರಿ ಮೂರು ವರ್ಷಗಳ ಬಳಿಕ ಅಪ್ಪನ ಜತೆಗೆ ಬಿಗ್‌ ಬಾಸ್‌ ಮನೆಯಲ್ಲೇ ಫೋನ್ ಮೂಲಕ ಮಾತಾಡಿದ್ದರು. ಕಿಚ್ಚ ಸುದೀಪ್ ಮುಂದೆಯೇ ತಂದೆ ಜತೆಗೆ ಡ್ರೋನ್ ಪ್ರತಾಪ್‌ ಫೋನ್ ಮೂಲಕ ಮಾತುಕತೆ ನಡೆಸಿದ್ದು, ಡ್ರೋಣ್ ಪ್ರತಾಪ್ ಅಭಿಮಾನಿಗಳು ಫುಲ್ ಹ್ಯಾಪಿಯಾಗಿದ್ದರು.ಆ ಕ್ಷಣ ಡ್ರೋಣ್ ಪ್ರತಾಪ್ ಬಿಕ್ಕಿ ಬಿಕ್ಕಿ ಅತ್ತಿದ್ದರು.ಇದೀಗ ಮತ್ತೆ ತನಿಷಾ ಮುಂದೆ ತಮ್ಮ ಹೊಸ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ.ಡ್ರೋನ್ ಪ್ರತಾಪ್‌ ತನಿಷಾ ಮುಂದೆ ಮಾತನಾಡಿ ʻʻಎದುರುಗಡೆ ಇದ್ದಾಗ,ನಾನು ಒಮ್ಮೆ ನನ್ನ ಅಪ್ಪನನ್ನು ಮುಟ್ಟಿ ಮಾತನಾಡಿಸಬೇಕು ಅನ್ನಿಸುತ್ತಿದೆ. ನನ್ನ ಅಮ್ಮನಿಗೆ ಎರಡು ಬಳೆ ಮಾಡಿಸ್ತೀನಿ. ತಂಗಿ ಮದುವೆಗೆ ರೆಡಿ ಇದ್ದಾಳೆ. ಒಳ್ಳೆ ಹುಡುಗನನ್ನ ನೋಡ್ತೀನಿ. ಮದುವೆ ಮಾಡಿಸ್ತೀನಿ. ಅಪ್ಪನಿಗೆ ತೋಟಕ್ಕೆ ನನ್ನ ಕಡೆಯಿಂದ ಮಷೀನ್‌ ಏನಾದರೂ ಮಾಡಿ ಕೊಡಬೇಕು ಅಂದ್ರೆ ಮಾಡ್ತೀನಿ. ಹೇಗಿದ್ದರೂ ಡ್ರೋನ್ ಇದೆ. ನಮ್ಮ ತೋಟದಲ್ಲೇ ಅದನ್ನ ಬಳಸಿಲ್ಲ. ನನ್ನ ತಂದೆಗೂ ಅದನ್ನ ತೋರಿಸ್ತೀನಿ. ಬಳಕೆ ಮಾಡೋದು ಹೇಗೆ ಅಂತ ತೋರಿಸಿಕೊಡ್ತೀನಿ. ನನ್ನ ತಂದೆ ಕೈಗೆ ಡ್ರೋನ್ ಕೊಟ್ಟು, ಹಾರಿಸಿ ತೋರಿಸ್ತೀನಿʼʼಎಂದು ಹೇಳಿಕೊಂಡಿದ್ದಾರೆ.ಇದೀಗ ಡ್ರೋನ್‌ ಪ್ರತಾಪ್‌ ಈ ಮಾತುಗಳನ್ನು ಕೇಳಿ ಪ್ರೇಕ್ಷಕರು ಕಮೆಂಟ್‌ ಮೂಲಕ ಶುಭ ಹಾರೈಸಿದ್ದಾರೆ. ʻʻಡ್ರೋನ್ ಪ್ರತಾಪ್‌ಗೆ ನಮ್ ಫುಲ್ ಸಪೋರ್ಟ್ʼʼಎಂದು ಬರೆದುಕೊಂಡಿದ್ದಾರೆ.ʻವ್ಹಾವ್ ಸೂಪರ್ ಪ್ರತಾಪ್, ನಿಮ್ಮೆಲ್ಲಾ ಆಸೆಗಳು ಈಡೇರಲಿ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.ಈ ಹಿಂದೆ ಪ್ರತಾಪ್‌ ಕುಟುಂಬದ ಬಗ್ಗೆ ಸುದೀಪ್‌ ಜತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದರು. ನನ್ನ ಅಮ್ಮನ ಹೆಸರು ಸವಿತಾ.. ಅವರು ನಿಮ್ಮ ದೊಡ್ಡ ಅಭಿಮಾನಿ.ನಾನು ಸಣ್ಣವನಿದ್ದಾಗಲೂ ನಿಮ್ಮ ಸಿನಿಮಾ ನೋಡುತ್ತಿದ್ದಾರೆ ಎಂದು ಹೇಳಿದ್ದರು. ಮೊದಲು ಅಮ್ಮ ಸವಿತಾ ಅವರಿಗೆ ಒಂದು ಹಲೋ ಹೇಳಿ ಎಂದು ಪ್ರತಾಪ್‌ ರಿಕ್ವೆಸ್ಟ್‌ ಮಾಡಿದರು. ಸುದೀಪ್‌ ಅವರು ವೇದಿಕೆಯ ಮೂಲಕ ʻಸವಿತಾ ಅವರೇ.. ನಿಮ್ಮ ಸುಪುತ್ರನ ಜತೆ ನಮ್ಮನ್ನೂ ನೋಡುತ್ತಿದ್ದೀರಾ. ನಿಮ್ಮ ಪತಿ ಕರೆ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಮಧ್ಯೆ ಏನು ನಡೆದಿದೆ ಅಂತ ನನಗೆ ಗೊತ್ತಿಲ್ಲ. ಆದರೆ, ಪ್ರೀತಿಸುವ ವಸ್ತುವನ್ನ ಕಳೆದುಕೊಳ್ಳದ ಹಾಗೆ ಆದಷ್ಟು ನೋಡಿಕೊಳ್ಳಿ.. ಥ್ಯಾಂಕ್ಯು’’ ಎಂದಿದ್ದರು.ಲಿಂಕ್ ಒತ್ತಿ ವಿಡಿಯೋ ವೀಕ್ಷಿಸಿ  

https://www.instagram.com/p/Cz_0SVErIyv/?utm_source=ig_embed&utm_campaign=embed_video_watch_again

https://www.instagram.com/p/Cz_0SVErIyv/?utm_source=ig_embed&utm_campaign=embed_video_watch_again

  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget