Latestಕ್ರೈಂವೈರಲ್ ನ್ಯೂಸ್ಸಿನಿಮಾ

ಮಾಜಿ ಬಿಗ್ ಬಾಸ್‌ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಪೊಲೀಸ್‌ ವಶಕ್ಕೆ..! ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದ ಪೊಲೀಸರು..!

658

ನ್ಯೂಸ್‌ ನಾಟೌಟ್:  ಕನ್ನಡದ ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳು ವಿನಯ್‌ ಗೌಡ ಮತ್ತು ರಜತ್ ಕಿಶನ್‌ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಕೇಸ್ ದಾಖಲಾಗಿತ್ತು. ಈಗ ಇಂದು(ಮಾ.24) ಸಂಜೆ ಬಸವೇಶ್ವರ ನಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿನಯ್‌ ಗೌಡ, ರಜತ್ ಕಿಶನ್ ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಗ್ಲಾಸ್​, ಕೈಯಲ್ಲಿ ಲಾಂಗು ಹಿಡಿದು ನಟ ದರ್ಶನ್​ ಅಭಿನಯದ ಮೆಜೆಸ್ಟಿಕ್ ಹಾಡಿಗೆ ಸ್ಲೋ ಮೋಷನ್ ವಾಕ್​ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಲಾಂಗ್ ಹಿಡಿದು ಪೋಸ್ ನೀಡಿದ್ದ ವಿನಯ್​ಗೌಡ, ರಜತ್ ಕಿಶನ್ ಮೇಲೆ ಬಸವೇಶ್ವರ ಠಾಣೆಯಲ್ಲಿ ಎಫ್ ​ಐಆರ್ ದಾಖಲಾಗಿದೆ. ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ಆರೋಪದಲ್ಲಿ ವಿಚಾರಣೆಗೆ ಬರುವಂತೆ ಪೊಲೀಸರು ಹೇಳಿದ್ದರು. ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಎಫ್‌ ಐಆರ್ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಬಸವೇಶ್ವರ ನಗರ ಪೊಲೀಸರು ವಿನಯ್​ ಗೌಡ ಹಾಗೂ ರಜತ್​ ಅವರನ್ನು ಮೌಖಿಕವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ. ಆದರೆ ಶೂಟಿಂಗ್​ ಹಿನ್ನೆಲೆಯಲ್ಲಿ ಹೊರಗಡೆ ಇರೋ ಕಾರಣ ರಜತ್​ ಸಮಯಾವಕಾಶ ಕೇಳಿದ್ದರು. ಆದರೆ ಈಗ ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.

ಇದನ್ನೂ ಓದಿಕೇರಳ: ಆತ್ಮಹತ್ಯೆಗೆ ಯತ್ನಿಸಿ ಕೋಮಾದಲ್ಲಿದ್ದ ವಿದ್ಯಾರ್ಥಿನಿ ಸಾವು..! ಹಾಸ್ಟೆಲ್ ವಾರ್ಡನ್ ಪೊಲೀಸ್ ವಶಕ್ಕೆ..!

See also  ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು, 4 ಮಂದಿ ಸ್ಥಳದಲ್ಲೇ ಸಾವು..! ಹಲವರಿಗೆ ಗಾಯ, ರೈಲ್ವೆ ಸಹಾಯವಾಣಿ ಬಿಡುಗಡೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget