ನ್ಯೂಸ್ ನಾಟೌಟ್: ಧರ್ಮಸ್ಥಳ ಚಲೋ ವಾಹನ ಜಾಥಾ ಹಮ್ಮಿಕೊಂಡು ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡಿತಿದೆ ಎಂದು ಆರೋಪಿಸಿರುವ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಲಾಯರ್ ಜಗದೀಶ್ ಹೆಸರೆತ್ತದೆ ವಿಧಾನ ಸಭೆಯಲ್ಲಿ ಕ್ರಮಕ್ಕಾಗಿ ಆಗ್ರಹಿಸಿದ್ದರು. ನೀವು ಕ್ರಮ ತೆಗೆದುಕೊಳ್ಳುತ್ತೀರೋ ಅಥವಾ ನಮ್ಮ ಹುಡುಗರು ಇದ್ದಾರೆ ಎನ್ನುವ ಮಟ್ಟಿಗೆ ಅವರ ಮಾತಿನ ವರಸೆ ಹೋಗಿತ್ತು. ಈ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಜಗ್ಗುದಾದ ಅಲಿಯಾಸ್ ಡೇರ್ ಡೆವಿಲ್ ಲಾಯರ್ ಜಗದೀಶ್ ಸವಾಲು ಹಾಕಿದ್ದಾರೆ. ಎಸ್.ಆರ್. ವಿಶ್ವನಾಥ್ ವಿರುದ್ಧ ವಿಡಿಯೋವೊಂದನ್ನು ಹೊರ ಬಿಟ್ಟಿರುವ ಜಗದೀಶ್ ಅವರು ಮುಂದೆ ಏನಾಗುತ್ತದೆ ಅನ್ನುವುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ಜಗ್ಗುದಾದ ಹೇಳಿದ್ದೇನು..?
ಶಾಸಕ ಎಸ್.ಆರ್. ವಿಶ್ವನಾಥ್ ಅವರು 2008ರಲ್ಲಿ ಹೇಗಿದ್ದರು ಅನ್ನುವುದನ್ನು ನಾನು ನೋಡಿದ್ದೇನೆ. ಆ ಬಳಿಕ ಅವರು ಏನಾದರೂ ಅನ್ನುವುದು ಗೊತ್ತಿದೆ. ಶಾಸಕರಾದ ಬಳಿಕ ಅವರು ಹಂತ-ಹಂತವಾಗಿ ಆರ್ಥಿಕವಾಗಿ ಹಠಾತ್ ಏರಿದ್ದಾರೆ. ಕೆಜಿಗಟ್ಟಲೆ ಬಂಗಾರ, ನೂರಾರು ಎಕರೆ ಜಮೀನು ಇದೆಲ್ಲ ಅವರ ಬಳಿ ಹೇಗೆ ಬಂತು ಅನ್ನುವುದು ನಮಗೆಲ್ಲ ಅಚ್ಚರಿ ಮೂಡಿಸುತ್ತದೆ. ಅವರು ಜೀವನದಲ್ಲಿ ಏಳಿಗೆ ಕಂಡಿರುವುದು ಖುಷಿಯೇ ಆದರೆ ಏಳಿಗೆಯನ್ನು ಸಂಪಾದಿಸಿದ ದಾರಿ ಯಾವುದು ಅನ್ನುವುದನ್ನು ನಾವು ತಿಳಿಯಬೇಕಿದೆ. ವಿಧಾನ ಸಭೆಯಂತಹ ಪವಿತ್ರ ಸ್ಥಳದಲ್ಲಿ ನಮ್ ಹುಡುಗರು ನನ್ನನ್ನು ನೋಡಿಕೊಳ್ಳುತ್ತಾರೆ ಅನ್ನುವ ಹೇಳಿಕೆ ನೀಡಿದ್ದಾನೆ, ಆತನ ಹೇಳಿಕೆ ಜವಾಬ್ದಾರಿಯುತ ಜನನಾಯಕನ ಹೇಳಿಕೆ ಇದ್ದಂತಿರಲಿಲ್ಲ. ಯಾವುದೋ ಗೂಂಡಾಗಳು ನೀಡಿದ ಹೇಳಿಕೆಯಂತೆ ಅನಿಸಿದೆ. ಅಂತಹವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬೇಕೋ ಅಥವಾ ಸೋಲಿಸಬೇಕೋ ಅನ್ನುವುದನ್ನು ಯಲಹಂಕದ ಜನರು ಯೋಚನೆ ಮಾಡಬೇಕು. ಇಷ್ಟು ದಿನ ಗೂಂಡಾಗಿರಿ ಮಾಡಿಕೊಂಡೇ ಆತ ತನ್ನ ಸಾಮ್ರಾಜ್ಯ ಕಟ್ಟಿಕೊಂಡಿದ್ದಾನೆ. ಮುಂದೆ ಸತ್ಯ ಹೇಳುವಂತಹ ಸಮಯ, ಒಂದೊಂದಾಗಿ ಆತನ ಅಸಲಿ ಮುಖಗಳನ್ನು ಜನರ ಎದುರು ಕಳಚಿ ಇಡುವ ಕೆಲಸ ಮಾಡುತ್ತೇನೆ ಎಂದು ಜಗದೀಶ್ ಹೇಳಿದ್ದಾರೆ.