ಕರಾವಳಿವೈರಲ್ ನ್ಯೂಸ್ಸುಳ್ಯ

ನವಿಲು ಮೊಟ್ಟೆ ಕದಿಯಲು ಸರಸರನೇ ಮರಕ್ಕೇರಿದ ಯುವತಿ,ಹಾರಿ ಬಂದ ನವಿಲಿನಿಂದ ಯುವತಿಗೆ ಕಾದಿತ್ತು ಆಘಾತ!

233

ನ್ಯೂಸ್ ನಾಟೌಟ್ :ತಾಯಿ ಪಕ್ಷಿಗಳು , ತಾಯಿ ಪ್ರಾಣಿಗಳು ತಮ್ಮ ಮರಿಗಳ ವಿಷಯಕ್ಕೆ ಬಂದ್ರೆ ಸುಮ್ನೆ ಬಿಡೋದಿಲ್ಲ ಎಂಬುದಕ್ಕೆ ಇಲ್ಲೊಂದು ಘಟನೆ ಪ್ರತ್ಯಕ್ಷ ಉದಾಹರಣೆಯಾಗಿದೆ.ಹೌದು,ಇಲ್ಲೊಂದು ಕಡೆ ನವಿಲು ಮೊಟ್ಟೆ ಇಟ್ಟಿದೆ.ಇನ್ನೇನು ಮರಿಗಳ ಆಗಮನದ ನಿರೀಕ್ಷೆಯಲ್ಲಿ ಸಂತಸದಲ್ಲಿದ್ದ ತಾಯಿ ನವಿಲಿಗೆ ಆಘಾತ ಎದುರಾಗಿದೆ.ಇಲ್ಲೊಬ್ಬಳು ಯುವತಿ ಮರವೇರಿ ನವಿಲು ಮೊಟ್ಟೆ ಕದಿಯಲು ಹೋಗಿದ್ದಾಳೆ.

ಇಷ್ಟು ಮಾತ್ರವಲ್ಲ ಯುವತಿ ನವಿಲಿನಿಂದ ತಕ್ಕ ಶಾಸ್ತಿಗೊಳಗಾಗಿ ಪೇಚು ಮೊರೆ ಹಾಕಿಕೊಂಡು ವಾಪಾಸ್ ಮನೆಗೆ ನಡೆದ ವಿಡಿಯೋ ಇದೀಗ ವೈರಲ್‌ ಆಗಿದೆ.ಮೊಟ್ಟೆಯನ್ನಿಟ್ಟು ತಾಯಿ ನವಿಲು ಎಲ್ಲೋ ಹಾರಿ ಹೋಗಿದೆ.ಇದೇ ಸಂದರ್ಭವನ್ನು ಬಳಸಿಕೊಂಡ ಯುವತಿ ಸರಸರನೇ ಮರವನ್ನೇರಿ ಮೊಟ್ಟೆಯನ್ನು ಕದಿಯಲು ಶುರು ಮಾಡಿದ್ದಾಳೆ.ಆಗ ಧಿಡೀರ್ ಬಂದ ನವಿಲು ಯುವತಿ ಮೇಲೆ ದಾಳಿ ನಡೆಸಿದೆ.

ಈ ವಿಡಿಯೋವನ್ನು ದ ಫಿಗೆನ್‌ ಎಂಬ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಗೂಡಿನಿಂದ ಮೊಟ್ಟೆ ಕದಿಯುತ್ತಿದ್ದಾಕೆಯ ಮೇಲೆ ಮೊದಲು ದಾಳಿ ನಡೆಸಿದ ನವಿಲು, ನಂತರ ಮರದ ಬುಡದಲ್ಲಿ ನಿಂತಿದ್ದ ಯುವತಿ ಮೇಲೂ ಹಾರಿ ದಾಳಿ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

See also  ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು, 4 ಮಂದಿ ಸ್ಥಳದಲ್ಲೇ ಸಾವು..! ಹಲವರಿಗೆ ಗಾಯ, ರೈಲ್ವೆ ಸಹಾಯವಾಣಿ ಬಿಡುಗಡೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget