ಬೆಂಗಳೂರು

ನಾಲ್ಕನೇ ಮಹಡಿಯಿಂದ ಬಿದ್ದು ಗಗನಸಖಿ ಅರ್ಚನಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್,ಕೊಲೆಯೋ?ಆತ್ಮಹತ್ಯೆಯೋ? ಆ ದಿನ ನಡೆದಿದ್ದೇನು?

ನ್ಯೂಸ್ ನಾಟೌಟ್: ದುಬೈನಿಂದ ತನ್ನ ಪ್ರಿಯಕರನ ನೋಡುವ ಆಸೆಯಿಂದ ಬೆಂಗಳೂರಿಗೆ ಬಂದಿದ್ದ ಪ್ರಿಯತಮೆಯ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ಪ್ರತಿಷ್ಠಿತ ಅಂತರಾಷ್ಟ್ರೀಯ ಏರ್‌ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅರ್ಚನಾ ಧೀಮನ್ ಈಕೆಯದ್ದು ಆತ್ಮಹತ್ಯೆಯಲ್ಲ ಬದಲಾಗಿ ಕೊಲೆ ಎಂದು ಸಾಬೀತಾಗಿದೆ.ಇದೀಗ ಅಪಾರ್ಟ್ ಮೆಂಟಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.

ಹೌದು, ಗಗನಸಖಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರನ ನೋಡಲೆಂದು ಬಂದಿದ್ದ ಪ್ರಿಯತಮೆಯನ್ನು ಅಪಾರ್ಟ್ ಮೆಂಟ್‌ನಿಂದ ತಳ್ಳಿ ಆತ್ಮಹತ್ಯೆ ಎಂದು ಹೇಳಿದ ಪ್ರಿಯಕರನ ಮುಖವಾಡ ಈಗ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಆದೇಶ್ ನನ್ನು ಭೇಟಿಯಾದ ದಿನ ಇಬ್ಬರೂ ಪಾರ್ಟಿ ಮಾಡಿದ್ದಾರೆ. ನಂತರ ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಆದೇಶ್, ಬಿಲ್ಡಿಂಗ್ ನ ನಾಲ್ಕನೇ ಮಹಡಿಯಿಂದ ಅರ್ಚನಾಳನ್ನ ತಳ್ಳಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಅರ್ಚನಾ ಕಳೆದ ಮೂರು ತಿಂಗಳಿನಿಂದ ಮದುವೆಯಾಗುವಂತೆ ಒತ್ತಾಯಿಸಿದ್ದು, ಆದೇಶ್ ಹಲವು ಉತ್ತರ ನೀಡಿ ಕಾಲಹರಣ ಮಾಡಿದ್ದಾನೆ. ಇದೇ ವಿಚಾರವಾಗಿ ಭೇಟಿಯಾದ ದಿನ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ಅರ್ಚನಾ , ಮದುವೆಯಾಗದಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾಳೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಆದೇಶ್ ಬಿಲ್ಡಿಂಗ್ ಮೇಲಿಂದ ತಳ್ಳಿದ್ದಾನೆ. ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತ ಪಡಿಸಿದ ಅರ್ಚನಾಳ ತಂದೆ ದೇವರಾಜ್ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿದ ಕೋರಮಂಗಲ ಪೊಲೀಸರು ಅರ್ಚನಾಳ ಪ್ರಿಯಕರ ಆದೇಶ್ ನನ್ನು ಬಂಧಿಸಿ ತೀವ್ರ ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಅರ್ಚನಾಳದ್ದು ಆತ್ಮಹತ್ಯೆ ಅಲ್ಲ ಕೊಲೆ ಅನ್ನೋದು ಬೆಳಕಿಗೆ ಬಂದಿದೆ.

Related posts

ಮನೆಯೊಂದರ ಶೆಡ್‌ ನಲ್ಲಿ ಕಟ್ಟಿ ಹಾಕಿ ನಾಯಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ವ್ಯಕ್ತಿ..! ದೂರು ದಾಖಲು

ಬೆಂಗಳೂರು: ಬಿಸಿಲಿನ ತಾಪಕ್ಕೆ ರೈಲ್ವೇ ಹಳಿಯ ರಬ್ಬರ್‌ಗೆ ಬೆಂಕಿ, 20 ನಿಮಿಷ ಮೆಟ್ರೋ ಸಂಚಾರ ಬಂದ್

ನಟ ದುನಿಯಾ ವಿಜಯ್ ನಿಂದ ಸಹಾಯ ಪಡೆದು ಜೈಲಿಂದ ಬಿಡುಗಡೆಯಾಗಿದ್ದವನಿಂದ ಜೋಡಿ ಕೊಲೆ..! ಏನಿದು ಘಟನೆ..?