ಸೋನೆಪತ್: ಹರಿಯಾಣ ಸರಕಾರ ಕ್ರೀಡೆಗೆ ನೀಡುವಷ್ಟು ಪ್ರೋತ್ಸಾಹವನ್ನು ಮತ್ಯಾವ ರಾಜ್ಯದವರೂ ನೀಡುವುದಿಲ್ಲ. ಅದಕ್ಕೆ ಇರಬೇಕು ಅಲ್ಲಿನ ಜನರು ಕ್ರೀಡೆಯಲ್ಲಿ ಯಾವಾಗಲೂ ಇತರ ರಾಜ್ಯದವರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಹರಿಯಾಣ ಸರಕಾರ ನೀಡುವ ಪ್ರೋತ್ಸಾಹ ಎಷ್ಟು ಎನ್ನುವುದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ. ಕುಸ್ತಿಪಟು ರವಿ ಕುಮಾರ್ ದಹಿಯಾ ಅವರು ಹರಿಯಾಣದವರು. ಸದ್ಯ ಒಲಿಂಪಿಕ್ಸ್ ಕುಸ್ತಿ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆ ಕ್ರೀಡಾಪಟುವಿಗೆ ಅಲ್ಲಿನ ಸರಕಾರ ಘೋಷಿಸಿದ ನಗದು ಎಷ್ಟು ಗೊತ್ತೆ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಕೋಟಿ. ಮಾತ್ರವಲ್ಲ ಕ್ಲಾಸ್ ವನ್ ದರ್ಜೆಯ ಉದ್ಯೋಗ, ಶೇ50 ರಷ್ಟು ರಿಯಾಯಿತಿಯೊಂದಿಗೆ ಒಂದು ಪ್ಲಾಟ್ ನೀಡುವುದಾಗಿಯೂ ಘೋಷಿಸಿದೆ. ಇದೆಲ್ಲವು ಪ್ರಯತ್ನಕ್ಕೆ ಸಂಧ ಗೆಲುವು. ನಾವೆಲ್ಲರು ಪ್ರಯತ್ನಶೀಲರಾಗಿ ಬದುಕು ಕಟ್ಟಿಕೊಳ್ಳೋಣ ಎನ್ನುವುದು ನ್ಯೂಸ್ ನಾಟೌಟ್ ತಂಡದ ಸದಾಶಯವಾಗಿದೆ.