ಕರಾವಳಿಕ್ರೈಂ

ಸುಳ್ಯ: ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆಗೆ ಬಿಗ್ ಟ್ವಿಸ್ಟ್, ಸಿಸಿ ಕ್ಯಾಮೆರಾ ಕೊಟ್ಟಿದೆ ಮಹತ್ವದ ಸುಳಿವು

ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಕಾಂತಮಂಗಲ ಶಾಲಾ ವಠಾರದಲ್ಲಿ ಯುವಕನೋರ್ವನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಸುಳಿವು ಸಿಕ್ಕಿದೆ. ಅಪರಾಧಿಯ ಸಿಸಿಟಿವಿ ಚಲನವಲನವನ್ನು ಪರಿಶೀಲಿಸಲಾಗಿದೆ. ಈ ಪ್ರಕಾರವಾಗಿ ಮಹತ್ವದ ದಾಖಲೆ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಸೋಮವಾರ ಶ್ವಾನದಳ ಬಂದು ಪರಿಶೀಲನೆ ನಡೆಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಕೊಲೆಯಲ್ಲಿ ಓರ್ವ ಭಾಗಿಯಾಗಿದ್ದಾನೆ ಎನ್ನಲಾಗುತ್ತಿದೆ. ಬಾರ್ ವೊಂದರಲ್ಲಿ ಕುಡಿದು ಇಬ್ಬರು ಆಟೋ‌ ಹತ್ತಿ ಬಂದಿರುವುದು ಸಿಸಿಟಿವಿ ದೃಶ್ಯ ದಲ್ಲಿ ಸೆರೆಯಾಗಿದೆ. ಆದಷ್ಟು ಶೀಘ್ರದಲ್ಲಿ ಹಂತಕನ ಬಂಧನವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಮೃತ ವಸಂತ್ ಕಾಣಿಯೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೂಲತಃ ವಿರಾಜಪೇಟೆಯವರು ಎಂದು ತಿಳಿದು ಬಂದಿದೆ. ಚೆಂಬು ಕುದ್ರೆಪಾಯದಿಂದ ಮದುವೆಯಾಗಿದ್ದರು. ಪತ್ನಿ ಬಂದು ಮೃತರ ಗುರುತು ಪತ್ತೆ ಹಚ್ಚಿದ್ದಾರೆ.

Related posts

ತಲೆಕೆಳಗಾದ ದರೋಡೆಕೋರರ ಪ್ಲಾನ್..! ದಂಪತಿಯ ದೈರ್ಯಕ್ಕೆ ಎಲ್ಲೆಡೆ ಪ್ರಶಂಸೆ… ಇಲ್ಲಿದೆ ವೈರಲ್ ವಿಡಿಯೋ

ತನಗೆ ಗುದ್ದಿದ ಕಾರಿನ ಜೊತೆ ಸೇಡು ತೀರಿಸಿಕೊಂಡ ಶ್ವಾನ..! ಸಿಸಿಟಿವಿ ಪರಿಶೀಲನೆ ಮಾಡಿದ ಕುಟುಂಬಸ್ಥರು ಶಾಕ್..!

ತಲೆಮರೆಸಿಕೊಂಡಿದ್ದ ನ್ಯೂಸ್ ಆ್ಯಂಕರ್ ದಿವ್ಯ ವಸಂತ ಕೇರಳದಲ್ಲಿ ಬಂಧನ..! ಬೆಂಗಳೂರಿಗೆ ಕರೆತಂದ ಪೊಲೀಸರು..!