ಕ್ರೈಂ

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

216
Spread the love

ಕಲ್ಲುಗುಂಡಿ: ಇಲ್ಲಿನ ಮುಖ್ಯಪೇಟೆಯಲ್ಲಿ ಇಬ್ಬರ ನಡುವೆ ಮಾರಾಮಾರಿ ಹೊಡೆದಾಟ ಮಂಗಳವಾರ ಬೆಳಗ್ಗೆ 9 ಗಂಟೆಗೆ ನಡೆದಿದ್ದು ಘಟನೆಯಲ್ಲಿ ಒಬ್ಬ ಮತ್ತೊಬ್ಬನ ಕೈ ಬೆರಳನ್ನು ಕತ್ತರಿಸಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳು ರತೀಶ್ ಎನ್ನುವವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲುಗುಂಡಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ಏನಿದು ಘಟನೆ?

ಕಲ್ಲುಗುಂಡಿಯ ಕಾಂಟ್ರಾಕ್ಟರ್ ಒಬ್ಬರ ಬಳಿ ಶೀನ ಕೊಯನಾಡು ಎನ್ನುವ ವ್ಯಕ್ತಿ ಕೆಲಸಕ್ಕೆ ಬರುತ್ತಿದ್ದ, ನಿತ್ಯ ಕುಡಿದು ಕೆಲಸಕ್ಕೆ ಬರುತ್ತಿದ್ದ. ಇದನ್ನು ಅಲ್ಲಿ ಕೆಲಸ ಮಾಡುತ್ತಿರುವ ಜೀಪ್ ಡ್ರೈವರ್ ರತೀಶ್ ಪ್ರಶ್ನಿಸಿದ್ದಾರೆ. ನೀನು ಕುಡಿದು ಕೆಲಸಕ್ಕೆ ಬರುವುದಾದರೆ ಬರಬೇಡ ಎಂದು ಹೇಳಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ಶೀನ ಕೊಯನಾಡು ಹೊಡೆದಾಟಕ್ಕೆ ಇಳಿದಿದ್ದಾನೆ. ಮಾತ್ರವಲ್ಲ ಕತ್ತಿಯಿಂದ ರತೀಶ್ ಗೆ ಕಡಿದಿದ್ದಾನೆ. ಇದರಿಂದಾಗಿ ರತೀಶ್ ಅವರ ಕೈ ಬೆರಳು ತುಂಡಾಗಿದೆ. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

See also  ಮದುವೆ ಹಾಲ್‌ ನಲ್ಲಿ ಮದುಮಗಳ ತಿಥಿ ಕಾರ್ಡ್ ಹಂಚಿದ ತಂದೆ..! ಹೆತ್ತವರನ್ನೇ ಪರಿಚಯವಿಲ್ಲ ಎಂದ ಮಗಳು..!
  Ad Widget   Ad Widget   Ad Widget