ದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಬಿಗ್‌ ಬಾಸ್‌ ಮನೆಯಿಂದ 24 ಗಂಟೆಯೊಳಗೆ ನಟಿ ‘ಎಲಿಮಿನೇಟ್’..!ವಿಜಯ್‌ ಸೇತುಪತಿಯ ʼಮಹಾರಾಜʼ ಸಿನಿಮಾದಲ್ಲಿ ಮಗಳ ಪಾತ್ರದಲ್ಲಿ ನಟಿಸಿದ್ದ ನಟಿ..! ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಬಿಗ್‌ ಬಾಸ್‌ ತಮಿಳು-8 ಆರಂಭವಾಗಿದ್ದು, ಕಮಲ್ ಹಾಸನ್ ಬದಲಿಗೆ ವಿಜಯ್‌ ಸೇತುಪತಿ (Vijay Sethupathi) ಹೊಸ ಬಿಗ್‌ ಬಾಸ್‌ ಹೋಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ತಮಿಳು ಬಿಗ್‌ ಬಾಸ್‌ನಲ್ಲಿ ಈ ಬಾರಿ ಸಾಕಷ್ಟು ಟ್ವಿಸ್ಟ್‌ ಗಳನ್ನು ನೀಡಲಾಗಿದೆ.

ವಿಜಯ್‌ ಸೇತುಪತಿ ಅವರ ʼಮಹಾರಾಜʼ ಸಿನಿಮಾದಲ್ಲಿ ಮಗಳ ಪಾತ್ರದಲ್ಲಿ ಸಚನಾ ನಮಿದಾಸ್‌ ನಟಿಸಿ ಇತ್ತೀಚೆಗೆ ಜನಪ್ರಿಯರಾಗಿದ್ದರು.
ತಮಿಳು ಬಿಗ್‌ ಬಾಸ್‌ ಮನೆಗೆ 18 ಮಂದಿ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ನಟ, ನಟಿ, ನಿರ್ಮಾಪಕ, ಗಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿದ್ದಾರೆ. ದೊಡ್ಮನೆಯೊಳಗೆ ಹೋಗಿ 24 ಗಂಟೆಯಲ್ಲೇ ಓರ್ವ ಸ್ಪರ್ಧಿ ಎಲಿಮಿನೇಷನ್‌ ಆಗಿದ್ದು, ಪ್ರೇಕ್ಷಕರು ಶಾಕ್‌ ಆಗುವಂತೆ ಮಾಡಿದೆ.

ಬಿಗ್‌ಬಾಸ್‌ ಮನೆಯೊಳಗೆ ಸ್ಪರ್ಧಿಗಳಿಗೆ 24 ಗಂಟೆಯೊಳಗೆಯೇ ಎಲಿಮಿನೇಷನ್‌ ಮಾಡಲಾಗಿದೆ. ಈ ಕೂಡಲೇ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗಲಿದ್ದಾರೆ ಎನ್ನುವ ಪ್ರೋಮೊವನ್ನು ತೋರಿಸಲಾಗಿದೆ.

ಸಚನಾ ನಮಿದಾಸ್‌ (Sachana Namidass) ನಿಮ್ಮ ಬಿಗ್‌ ಬಾಸ್‌ ಜರ್ನಿ ಇಲ್ಲಿಗೆ ಮುಕ್ತಾಯವಾಗಿದೆ ಎಂದು ಪ್ರೋಮೊದಲ್ಲಿ ತೋರಿಸಲಾಗಿದೆ. ಇದನ್ನು ಕೇಳಿ ಮನೆಯಲ್ಲಿನ ಎಲ್ಲರೂ ಒಮ್ಮೆ ಭಾವುಕರಾಗಿದ್ದಾರೆ. ಕಣ್ಣೀರಿಟ್ಟು ಸಚನಾ ಬಿಗ್‌ ಬಾಸ್‌ ಮನೆಯಿಂದ ಆಚೆ ಹೋಗುವುದನ್ನು ತೋರಿಸಲಾಗಿದೆ.
ಇದನ್ನು ನೋಡಿದ ಪ್ರೇಕ್ಷಕರು ಏನಾದರೂ ಒಂದು ಟ್ವಿಸ್ಟ್‌ ಇರಲೇಬೇಕೆಂದು ಊಹಿಸಿದ್ದಾರೆ. ಪೂರ್ತಿ ಸಂಚಿಕೆ ನೋಡಲು ಕಾಯುತ್ತಿದ್ದಾರೆ.

Related posts

ಬೆಂಗಳೂರಿಗರಿಗೂ ಕಾಡುತ್ತಿದೆ ಚಿರತೆಯ ಭಯ..! ನೀರಿನ ಟ್ಯಾಂಕರ್‌ ನವರೂ ಏರಿಯಾಗೆ ಬರುತ್ತಿಲ್ಲ. ಕುಡಿಯಲು ನೀರಿಲ್ಲ ಎಂದು ನಿವಾಸಿಗಳ ಪರದಾಟ..!

ಸುತ್ತೂರು ಮಠಕ್ಕೆ ರೋಬೋ ಆನೆ..! ಈ ಗಜರಾಜನ ವಿಶೇಷತೆಗಳೇನು..?

ಡೆಂಗ್ಯೂಗೆ 6 ವರ್ಷದ ಬಾಲಕಿ ದುರಂತ ಅಂತ್ಯ..! 4 ಲಕ್ಷ ರೂ. ಖರ್ಚು ಮಾಡಿದ್ರು ಉಳಿಸಿಕೊಳ್ಳಲಾಗಲಿಲ್ಲ ಎಂದು ತಂದೆ ಕಣ್ಣೀರು..!