ಕ್ರೈಂ

ಬಿಗ್ ಬಾಸ್‌ ಮಾಜಿ ಸ್ಪರ್ಧಿ,ಲಾಯರ್​ ಜಗದೀಶ್​ರನ್ನು ಬಂಧಿಸಿದ ಪೊಲೀಸರು!

ನ್ಯೂಸ್‌ ನಾಟೌಟ್‌: ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಮಾಜಿ ಸ್ಪರ್ಧಿ ಹಾಗೂ ವಕೀಲ ಜಗದೀಶ್ ಮತ್ತು ಅವರ ಗನ್​ ಮ್ಯಾನ್​ನನ್ನು ಕೊಡಿಗೇಹಳ್ಳಿ ಪೊಲೀಸರಿಂದ ಬಂಧಿಸಿದ್ದಾರೆ. ತೇಜಸ್ ಎಂಬುವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಯರ್​ ಜಗದೀಶ್​ರನ್ನು ಬಂಧಿಸಿದ್ದಾರೆ.

ಶುಕ್ರವಾರ ನಡೆದ ಗಲಾಟೆಯಲ್ಲಿ ಜಗದೀಶ್ ಅವರ ಗನ್​ಮ್ಯಾನ್​ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.ಈ ಸಂಬಂಧ ಪ್ರಕರಣ ದಾಖಲಾಗಿದೆ.ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸೆನ್ಸ್ ಪಡೆದು, ಕರ್ನಾಟಕದಲ್ಲಿ ಫೈರಿಂಗ್ ಮಾಡಿದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ಇದಲ್ಲದೇ ಇತ್ತ ದೂರುದಾರ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಅಣ್ಣಮ್ಮ ದೇವಿ ಕೂರಿಸುವ ವಿಚಾರಕ್ಕೆ ಕಿರಿಕ್ ಆಗಿತ್ತು. ಈ ಬೆನ್ನಲ್ಲೇ ಜನವರಿ 24ರ ರಾತ್ರಿ ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಆಗಿದೆ. ಕೆಲವರು ಕೋಲು ದೊಣ್ಣೆ ತೆಗೆದುಕೊಂಡು ಬಂದು ಜಗದೀಶ್ ಅವರ ಕಾರನ್ನು ಪೀಸ್ ಪೀಸ್ ಮಾಡಿದ್ದಾರೆ. ಜಗದೀಶ್​ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಈ ವೇಳೆ ಜಗದೀಶ್​ ಅವರ ಗನ್​ ಮ್ಯಾನ್​ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

Related posts

269 ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ನಿಧನ..! ಚಿಕಿತ್ಸೆಗೆ ಸ್ಪಂದಿಸದೆ ನಟ ಸರಿಗಮ ವಿಜಿ ಸಾವು..!

ಐಸಿಸ್ ಮಾದರಿಯಲ್ಲಿ ನೇಹಾ ಕುತ್ತಿಗೆಗೆ ಚಾಕು ಹಾಕಿ ಕೊಲೆ, ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತ್ತಾಲಿಕ್ ಗಂಭೀರ ಆರೋಪ

ಕೂಳೂರು: ನಾಗನ ಕಟ್ಟೆಯನ್ನು ಪುಡಿಗೈದ ದುಷ್ಕರ್ಮಿಗಳು, ಅಪರಾಧಿಗಳನ್ನು ಬಂಧಿಸಿ ಹಿಂದೂ ಸಂಘಟನೆಗಳ ಒತ್ತಾಯ