ನ್ಯೂಸ್ ನಾಟೌಟ್:ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾವನಾ ರಾಮಣ್ಣ ಅವರು ಮದುವೆ ಆಗಿಲ್ಲ. ಆದರೆ ಮಕ್ಕಳನ್ನು ಪಡೆಯುವ ದಿಟ್ಟ ನಿರ್ಧಾರ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಉಂಟು ಮಾಡಿದೆ.ಹೌದು, ಈಗ 40 ವರ್ಷ ದಾಟಿದ ಬಳಿಕ ಅವಳಿ ಮಕ್ಕಳಿಗೆ ಅವರು ತಾಯಿ ಆಗುತ್ತಿದ್ದಾರೆ.ಐವಿಎಫ್ (IVF) ತಂತ್ರಜ್ಞಾನದ ಮೂಲಕ ಇದು ಸಾಧ್ಯವಾಗುತ್ತಿದೆ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಾಯಿ ಆಗುತ್ತಿರುವುದರ ಬಗ್ಗೆ ಭಾವನಾ ರಾಮಣ್ಣ ಅವರು ಪೋಸ್ಟ್ ಮಾಡಿದ್ದಾರೆ.‘ಒಂದು ಹೊಸ ಅಧ್ಯಾಯ, ಒಂದು ಹೊಸ ಲಯ’ ಎನ್ನುವ ಮೂಲಕ ಅವರು ಬರಹ ಆರಂಭಿಸಿದ್ದಾರೆ. ‘ಇದನ್ನು ನಾನು ಹೇಳುತ್ತೇನೆ ಅಂತ ಊಹಿಸಿಯೇ ಇರಲಿಲ್ಲ. ಆದರೆ ನಾನು ಈಗ 6 ತಿಂಗಳ ಗರ್ಣಿಣಿ. ಅವಳಿ ಮಕ್ಕಳ ತಾಯಿ ಆಗುತ್ತಿದ್ದೇನೆ. ಧನ್ಯತಾ ಭಾವ ಆವರಿಸಿದೆ’ ಎಂದು ಭಾವನಾ ರಾಮಣ್ಣ ಅವರು ಹೇಳಿದ್ದಾರೆ. ಜೊತೆಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.‘20ರ ವಯಸ್ಸಿನಲ್ಲಿ ಮತ್ತು 30ರ ವಯಸ್ಸಿನಲ್ಲಿ ನಾನು ತಾಯಿ ಆಗುವ ಬಗ್ಗೆ ಆಲೋಚಿಸಿರಲಿಲ್ಲ. ಆದರೆ 40ನೇ ವಯಸ್ಸು ಆದಾಗ ತಾಯಿಯಾಗುವ ಬಯಕೆ ತೀವ್ರವಾಗಿತ್ತು. ಒಂಟಿ ಮಹಿಳೆಯಾಗಿ ಈ ದಾರಿ ಸುಲಭದ್ದಾಗಿರಲಿಲ್ಲ. ಸಾಕಷ್ಟು ಐವಿಎಫ್ ಕ್ಲಿನಿಕ್ಗಳು ನನ್ನನ್ನು ಕೂಡಲೇ ತಿರಸ್ಕರಿಸಿದವು. ಆದರೆ ಡಾಕ್ಟರ್ ಸುಷ್ಮಾ ಅವರನ್ನು ರೇನ್ ಬೋ ಆಸ್ಪತ್ರೆಯಲ್ಲಿ ಭೇಟಿಯಾದಾಗ ಅವರು ನನ್ನನ್ನು ಯಾವುದೇ ಜಡ್ಜ್ಮೆಂಟ್ ಇಲ್ಲದೇ ಸ್ವಾಗತಿಸಿದರು. ಅವರ ಬೆಂಬಲದಿಂದ ನಾನು ಮೊದಲ ಪ್ರಯತ್ನದಲ್ಲೇ ಗರ್ಭಿಣಿ ಆದೆ’ ಎಂದಿದ್ದಾರೆ ಭಾವನಾ ರಾಮಣ್ಣ .
No related posts.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ