ಬೆಂಗಳೂರುರಾಜಕೀಯ

ಆಪ್‌ ಬಿಟ್ಟು ಬಿಜೆಪಿ ಸೇರಿದ ನಿವೃತ್ತ ಪೊಲೀಸ್‌ ಅಧಿಕಾರಿ ಭಾಸ್ಕರ ರಾವ್‌

ನ್ಯೂಸ್‌ನಾಟೌಟ್‌: ನಿವೃತ್ತ ಪೊಲೀಸ್‌ ಅಧಿಕಾರಿ ಭಾಸ್ಕರ ರಾವ್‌ ಆಮ್‌ ಆದ್ಮಿ ಪಾರ್ಟಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಬುಧವಾರ ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಶಾಲು, ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಭಾಸ್ಕರ್‌ ರಾವ್‌ ಜತೆ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು.

ಪೊಲೀಸ್‌ ವೃತ್ತಿಯಿಂದ ನಿವೃತ್ತಿಯಾದ ಬಳಿಕ ಸಾಮಾಜಿಕ ಸೇವೆ ಮಾಡಲು ರಾಜಕೀಯ ಕ್ಷೇತ್ರ ಆಯ್ಕೆ ಮಾಡಿ ನಿರೀಕ್ಷೆಯೊಂದಿಗೆ ಆಮ್‌ ಆದ್ಮಿ ಪಕ್ಷ ಸೇರಿದ್ದೆ. ಆದರೆ ಕರ್ನಾಟಕದಲ್ಲಿ ಎಎಪಿ ಬೆಳೆಯುತ್ತಿಲ್ಲ. ಈ ಕಾರಣಕ್ಕೆ ಬಿಜೆಪಿಯ ಸಿದ್ಧಾಂತ ಮತ್ತು ಪಕ್ಷದ ನಾಯಕರ ಕಾರ್ಯಶೈಲಿ ನೋಡಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗಿದ್ದೇನೆ ಎಂದು ಭಾಸ್ಕರ ರಾವ್‌ ನುಡಿದರು.

ಭಾಸ್ಕರ ರಾವ್‌ ಅವರು ಪೊಲೀಸ್‌ ವೃತ್ತಿಯಿಂದ ನಿವೃತ್ತಿಯಾದ ಬಳಿಕ ಆಮ್‌ ಆದ್ಮಿ ಪಾರ್ಟಿ ಸೇರಿ ರಾಜಕೀಯ ಅನುಭವ ಪಡೆದಿದ್ದಾರೆ. ಅವರು ಪಕ್ಷದಲ್ಲಿ ಯಾವುದೇ ಆಸೆ, ಆಕಾಂಕ್ಷೆಗಳನ್ನು ಇಟ್ಟುಕೊಂಡು ಬಂದಿಲ್ಲ. ಅವರಿಗೆ ಶುಭವಾಗಲಿ ಎಂದು ನಳಿನ್‌ಕುಮಾರ್‌ ಕಟೀಲ್‌ ಆಶಿಸಿದರು.

Related posts

ಕರುನಾಡ ಚುನಾವಣೆಯಲ್ಲಿ ಒಟ್ಟು 4 ಸ್ಥಾನ ಗೆದ್ದ ಇತರರು ಯಾರ್ಯಾರು? ಇಲ್ಲಿದೆ ಸಂಪೂರ್ಣ ವಿವರ

ದಕ್ಷಿಣಕನ್ನಡ ಜಿಲ್ಲೆಗೆ ದಿನೇಶ್‌ ಗುಂಡೂರಾವ್, ಉಡುಪಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಉಸ್ತುವಾರಿ ಸಚಿವರು

ಹೆತ್ತ ಮಗುವನ್ನೇ ದಿನವಿಡೀ ಮನೆಯೊಳಗೆ ಕೂಡಿ ಹಾಕುತ್ತಿದ್ದ ತಾಯಿ..! ಪ್ರಿಯಕರನೊಂದಿಗೆ ಸೇರಿ 3 ವರ್ಷದ ಕಂದಮ್ಮನಿಗೆ ಮನಬಂದಂತೆ ಹಲ್ಲೆ..!ಏನಿದು ಅಮಾನವೀಯ ಘಟನೆ?