ನ್ಯೂಸ್ ನಾಟೌಟ್: ಬಂಗಾರ ಜಿಂಕೆ ಖ್ಯಾತಿಯ ಹಿರಿಯ ಸಿನಿಮಾ ನಟಿ ಭಾರತೀ ವಿಷ್ಣು ವರ್ಧನ್ ಸಂಪಾಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಊಟ ಮಾಡಿದರು.
ಇತ್ತೀಚೆಗೆ ಅವರು ತಮ್ಮ ಕುಟುಂಬದೊಂದಿಗೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಸಂಪಾಜೆಯ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸಂಪಾಜೆ ಕೆಫೆಗೆ ಭೇಟಿ ನೀಡಿದರು. ಅಲ್ಲಿನ ಮಾಲೀಕರಾದ ಶಂಕರ್ ಪ್ರಸಾದ್ ರೈ ಹಾಗೂ ಅವರ ಕುಟುಂಬ ತಯಾರಿಸುವ ಊಟವನ್ನು ಸವಿದ ಅವರು ಸುಮಾರು 1 ಗಂಟೆ ಕುಟುಂಬದ ಜೊತೆಗೆ ಮಾತನಾಡಿದರು. ಅಲ್ಲಿನ ಆಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮೈಸೂರಿನತ್ತ ಪ್ರಯಾಣ ಬೆಳೆಸಿದರು.
ಕನ್ನಡದ ಹೆಸರಾಂತ ನಟ ದಿವಂಗತ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಧರ್ಮ ಪತ್ನಿ ಭಾರತೀ ವಿಷ್ಣುವರ್ಧನ್ ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ.