ಕರಾವಳಿ

ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ, ಕಣ್ಮನ ಸೆಳೆದ ಶೋಭಾಯಾತ್ರೆ

397

ನ್ಯೂಸ್ ನಾಟೌಟ್ :ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣೆಯ ಅದ್ದೂರಿ ಶೋಭಾಯಾತ್ರೆಯು ಬೆಳಿಗ್ಗೆ ಪುತ್ತೂರಿನ ದರ್ಬೆಯಿಂದ ಆರಂಭಗೊಂಡಿತು.ಮೆರವಣಿಗೆಯುಲ್ಲಿ 10 ಸ್ತಬ್ದ ಚಿತ್ರಗಳು, 37 ವಿವಿಧ ನೃತ್ಯ ತಂಡಗಳು, ಜನಪದ ಕಲೆಗಳ ಪ್ರದರ್ಶನ ಶೋಭಾಯಾತ್ರೆಯು ಕಣ್ಮನ ಸೆಳೆಯಿತು.

ಕಣ್ಮನ ಸೆಳೆದ ಶೋಭಾಯಾತ್ರೆ:


ಭಾರತಮಾತ ಅಲಂಕೃತ ವಾಹನ, ಚೆಂಡೆ, ಭಗವಾಧ್ವಜ, ಕೊಡೆಗಳು, ಭಜನಾ ತಂಡ, ಸ್ವಾಮೀಜಿ ಪ್ರತಿಮೆ ಇರುವ ರಥ ಗಮನ ಸೆಳೆದವು.ಸಾವಿರಾರು ಸಂಖ್ಯೆಯಲ್ಲಿ ನೆರೆದ ಜನರು ಈ ವೈಭವ ನೋಡಿ ಕಣ್ತುಂಬಿಕೊಂಡರು.ನಾದಸ್ವರ, ಬಣ್ಣ ಬಣ್ಣದ ಕೊಡೆಗಳು, ಗೊಂಬೆಗಳು, ಬ್ಯಾಂಡ್‌ಸೆಟ್, ಕೊಡಗು ನೃತ್ಯ, ಸ್ತಬ್ದ ಚಿತ್ರಗಳು ಈ ಒಂದು ಸಂಭ್ರಮಕ್ಕೆ ಸಾಕ್ಷಿಯಾಯಿತು.ವೀರಗಾಸೆ ನೃತ್ಯ, ಕಂಸಾಲೆ, ಡೊಳ್ಳುಕುಣಿತ, ಸಪ್ತವರ್ಣದ ಸೀರೆಯುಟ್ಟ ನಾರಿಯರ ಸಪ್ತ ಗುಂಪುಗಳು ಕಾಲಭೈರವೇಶ್ವರ ಮತ್ತು ಅಮ್ಮನವರ ರಥ, ಯಾತ್ರೆಯುದ್ದಕ್ಕೂ ಸಾಗರೋಪಾದಿ ಸಂಖ್ಯೆಯಲ್ಲಿ ಜನ ಸೇರಿದ್ದು,ಈ ವೈಭವಕ್ಕೆ ಸಾಕ್ಷಿಯಾದರು.

ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ, ಶ್ರೀ ಧರ್ಮಪಾಲನಾಥ ಸ್ವಾಮೀಜಿ , ಡಿ.ಕೆ ಶಿವಕುಮಾರ್ , ಡಿ.ವಿ ಸದಾನಂದ ಗೌಡ , ಸಂಜೀವ ಮಠಂದೂರು ಸೇರಿದಂತೆ ಅಗ್ರಗಣ್ಯ ನಾಯಕರು ಇದ್ದರು.

See also  ಬಸ್‌ ಸ್ಟ್ಯಾಂಡ್‌ನಲ್ಲಿ ನವಜಾತ ಶಿಶುವನ್ನು ಬಿಟ್ಟು ದಂಪತಿ ಪರಾರಿ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget