ಕಾಸರಗೋಡುರಾಜಕೀಯ

ಕಾಸರಗೋಡು : ಫಲಾನುಭವಿಗೆ ನೂತನ ಮನೆ ಹಸ್ತಾಂತರಿದ ಶಾಸಕಿ ಭಾಗೀರಥಿ ಮುರುಳ್ಯ, ಶಿವಕೃಷ್ಣ ಫ್ರೆಂಡ್ಸ್ ಕ್ಲಬ್ ವತಿಯಿಂದ ಓಣಂ ಆಚರಣೆ

197

ನ್ಯೂಸ್ ನಾಟೌಟ್ : ಕಾಸರಗೋಡು ಜಿಲ್ಲೆಯ ಮದೂರು ಪಂಚಾಯತ್ ವ್ಯಾಪ್ತಿಯ ಕೂಡ್ಲುವಿನಲ್ಲಿ ಶಿವಕೃಷ್ಣ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ‘ಓಣಂ ಆಚರಣೆ 2023’ ಕಾರ್ಯಕ್ರಮ ನಡೆಯಿತು.

ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ‘ಹಬ್ಬಗಳು ಆಚರಿಸುವುದರಿಂದ ನಾಡಿನ ಜನರಿಗೆ ಹಬ್ಬಗಳ ಆಚರಣೆಯ ಬಗ್ಗೆ ತಿಳುವಳಿಕೆ ನೀಡುತ್ತದೆ.

ಅದರಲ್ಲೂ ಸಾಂಸ್ಕೃತಿಕ ಕಲೆಗಳು, ಹಿನ್ನಲೆ , ಉಡುಗೆ – ತೊಡುಗೆ ಜನರನ್ನು ಒಂದುಗೋಡಿಸುವ ಒಗ್ಗಟ್ಟನ್ನು ನಿರ್ಮಿಸುತ್ತದೆ. ಅಲ್ಲದೆ ವಿಶೇಷವಾಗಿ ಓಣಂ ಹಬ್ಬಕೇಳದಲ್ಲಿ ಆಚರಿಸಲಾಗಿತ್ತಿದ್ದ,ಈಗ ಎಲ್ಲಾ ರಾಜ್ಯಗಳಲ್ಲೂ ಆಚರಿಸುವ ಸಾಂಪ್ರದಾಯ ಬಂದಿದೆ’ ಎಂದು ಶುಭಹಾರೈಸಿದರು.
ಬಳಿಕ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಿವಕೃಷ್ಣ ಫ್ರೆಂಡ್ಸ್ ಕ್ಲಬ್ ಸಹಕಾರದಿಂದ ನಿರ್ಮಿಸಿದ ಬಡ ಕುಟುಂಬಕ್ಕೆ ಮನೆಯ ಕೀಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು.

ಫಲಾನುಭವಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ರವೀಶ್ ತಂತ್ರಿ ಕುಂಟಾರು, ಕ್ಲಬ್ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

See also  ಕಾಸರಗೋಡು: ಕಾರು ಪಾರ್ಕ್ ಮಾಡುವಾಗ ಕಾರಿನಡಿಗೆ ಬಿದ್ದು ಎಳೆಯ ಕಂದಮ್ಮ ಸಾವು, ವಿಡಿಯೋ ವೈರಲ್‌, ವಾಹನ ಚಾಲಕರೇ ಪಾರ್ಕ್‌ ಮಾಡುವಾಗ ಹುಷಾರ್‌..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget