ಊರುಬೈಲು: ಆಗಸ್ಟ್ 1 ಹದಿನೈದರವರೆಗಿನ “ಸ್ವಚ್ಛ ಭಾರತ್ ಪಾಕ್ಷಿಕ ಅಭಿಯಾನ” ಯೋಜನೆ ಅಂಗವಾಗಿ ನೆಹರು ಯುವ ಕೇಂದ್ರ, ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಭಗವಾನ್ ಸಂಘ ಊರುಬೈಲು ಇದರ ಸದಸ್ಯರು ಆಗಸ್ಟ್ 1ರಂದು ಚೆಂಬು ಗ್ರಾಮದ ಎಲ್ಲಾ ಪ್ರಮುಖ ಸೇತುವೆಗಳನ್ನು ಸ್ವಚ್ಛಗೊಳಿಸಿದರು. ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿಗಳಾದ ಯತೀಶ್ ಹನಿಯಡ್ಕ ಸಂಘದ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು. ಅಭಿಯಾನದ ನೇತೃತ್ವವನ್ನು ಪಯಸ್ವಿನಿ ಸೊಸೈಟಿ ಅಧ್ಯಕ್ಷರಾದ ಯನ್.ಸಿ ಅನಂತ್ ಊರುಬೈಲು ,ಸಂಘದ ಅಧ್ಯಕ್ಷ ದಿನೇಶ್ ಸಣ್ಣಮನೆ ವಹಿಸಿದ್ದರು. ಗ್ರಾಮದ ಪ್ರಮುಖರಾದ ಸುಬ್ರಹ್ಮಣ್ಯ ಉಪಾಧ್ಯಾಯ ,ಆದಂ ಸೆಂಟ್ಯಾರ್ ,ಪ್ರಸನ್ನ ಕಾಚೇಲು ಮುಂತಾದವರು ಶುಭ ಹಾರೈಸಿದರು.