Latest

ನಿಮ್ಮ ತಲೆಯನ್ನೊಮ್ಮೆ ಮುಟ್ಟಿ ನೋಡಿ ಕೂದಲು ಇದೆಯೇ ಎಂದು!!ತಲೆಕೂದಲನ್ನೂ ಕದಿಯೋ ಕಳ್ಳರಿದ್ದಾರೆ ಎಚ್ಚರಿಕೆ!!ಎಂಥ ಕಾಲ ಬಂತೋ..?

367
Spread the love

ನ್ಯೂಸ್‌ ನಾಟೌಟ್: ಏನು ಕಾಲ ಬಂತಪ್ಪಾ ದೇವರೇ… ಮನುಷ್ಯ ಯಾಕಿಂಗೆ ಆಡ್ತಾನೆ… ಒಂದು ತಿಳಿಯದು.. ನಗದು, ಚಿನ್ನಾಭರಣ ಕಳವಾದ (Theft) ಬಗ್ಗೆ ಆಗಾಗ್ಗೆ ವರದಿಗಳಾಗುತ್ತಿರುವುದರ ಬಗ್ಗೆ ಕೇಳಿದ್ದೇವೆ. ಆದರೆ ಬೆಂಗಳೂರಲ್ಲಿ (Bengaluru) ಏನು ಸಿಕ್ಕಿದರೂ ಕಳ್ಳರು ಬಿಡುವುದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಬೈಕ್ ಆಯ್ತು, ಚಪ್ಪಲಿ ಆಯ್ತು, ದೇವಸ್ಥಾನ ಹುಂಡಿಯೂ ಆಯ್ತು, ಇದೀಗ ಖತರ್ನಾಕ್ ಕಳ್ಳರು ತಲೆಗೂದಲನ್ನೂ ಕದ್ದೊಯ್ದಿದ್ದಾರೆ! ಹೌದು, ಬರೋಬ್ಬರಿ 27 ಮೂಟೆ ಕೂದಲು ಕಳವಾಗಿದೆ. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ (Soladevanahalli Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಒಂದಲ್ಲ, ಎರಡಲ್ಲ ಮೂಟೆಗಟ್ಟಲೇ ಕೂದಲನ್ನು ಕಳ್ಳರು ಕದೊಯ್ದಿದ್ದಾರೆ. ಸೋಲದೇವನಹಳ್ಳಿ ಬಳಿಯ ಲಕ್ಷ್ಮೀ ಪುರ ಕ್ರಾಸ್‌ನಲ್ಲಿರುವ ಗೋಡೌನ್ ನಲ್ಲಿ ಕೂದಲನ್ನು ಸಂಗ್ರಹಿಸಿಡಲಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಕೂದಲಿನ ಮೂಟೆಗಳನ್ನು ಎರಡು ದಿನಗಳ ಹಿಂದೆ ಕಳ್ಳತನ ಮಾಡಲಾಗಿದೆ.ಈ ಸಂಬಂಧ ಗೋಡೌನ್ ಮಾಲೀಕ ವೆಂಕಟರಮಣ ಎಂಬವರು ದೂರು ನೀಡಿದ್ದಾರೆ. ಆರು ಜನ ಖದೀಮರು ವಾಹನದಲ್ಲಿ ಬಂದು ಕೂದಲು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.ಖದೀಮರ ಕುಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಾಲೀಕ ವೆಂಕಟರಮಣ ಅವರು ಚೀನಾ, ಬರ್ಮಾ, ಹಾಂಕಾಂಗ್ ಗೆ ಕೂದಲು ರಫ್ತು ಮಾಡುವ ಉದ್ಯಮ ಹೊಂದಿದ್ದಾರೆ. ಕಳೆದ ವಾರ ಚೀನಾದ ವ್ಯಕ್ತಿಗಳು ಬಂದು ವಿಗ್ ತಯಾರಿಕೆಗೆ ಕೂದಲು ಕಳುಹಿಸುವಂತೆ ಮಾತುಕತೆ ನಡೆಸಿದ್ದರು. ಅವರಿಗೆ ಕಳುಹಿಸಿಕೊಡುವುದಕ್ಕಾಗಿ ಕೂದಲನ್ನು ಮೂಟೆ ಕಟ್ಟಿ ಇಡಲಾಗಿತ್ತು. ಇನ್ನೇನು ಎರಡು ದಿನಗಳಲ್ಲಿ ಕೂದಲು ರಫ್ತು ಆಗಬೇಕು ಎನ್ನುವಷ್ಟರಲ್ಲಿ ತಲೆಗೂದಲು ಕಳ್ಳರ ಪಾಲಾಗಿದೆ. 27 ಮೂಟೆಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. CCTVದೃಶ್ಯ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

 

 

View this post on Instagram

 

A post shared by News not out (@newsnotout)

See also  ದೈತ್ಯ ಹೆಬ್ಬಾವು ಹಿಡಿದು ಸ್ಕಿಪ್ಪಿಂಗ್​ ಆಡಿದ ಮಕ್ಕಳು! ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟರು!ನೆಟ್ಟಿಗರಿಂದ ತರಾಟೆ
  Ad Widget   Ad Widget   Ad Widget   Ad Widget