ಕರಾವಳಿ

ಬೆಟ್ಟಂಪಾಡಿ: ಕಾಡುಕೋಣ ತಿವಿದು ವ್ಯಕ್ತಿಗೆ ಗಂಭೀರ ಗಾಯ,ಆಸ್ಪತ್ರೆಯಲ್ಲಿ ಚಿಕಿತ್ಸೆ

ನ್ಯೂಸ್ ನಾಟೌಟ್: ವ್ಯಕ್ತಿಯೋರ್ವರಿಗೆ ಕಾಡು ಕೋಣ ತಿವಿದು ಗಂಭೀರ ಗಾಯಗೊಂಡ ಘಟನೆ ಪುತ್ತೂರಿನ ಬೆಟ್ಟಂಪಾಡಿ ಸಮೀಪದ ನಿಡ್ಪಳ್ಳಿ ಬ್ರಹ್ಮರಗುಂಡ ಎಂಬಲ್ಲಿ ನಡೆದಿದೆ.

ಪದ್ಮನಾಭ ಪ್ರಭು(76) ಎಂಬವರು ಕಾಡುಕೋಣ ತಿವಿದು ಗಂಭೀರ ಗಾಯಗೊಂಡ ವ್ಯಕ್ತಿ. ಬ್ರಹ್ಮರಗುಂಡ ನಿವಾಸಿ ಪದ್ಮನಾಭ ಪ್ರಭುರವರು ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ತನ್ನ ತೋಟಕ್ಕೆ ಹೋಗುತ್ತಿದ್ದಾಗ ದಿಢೀರನೆ ಪ್ರತ್ಯಕ್ಷವಾದ ಕಾಡುಕೋಣ ಅವರ ಮೇಲೆ ದಾಳಿ ಮಾಡಿದೆ.ಕಾಡುಕೋಣ ತಿವಿದ ತೀವ್ರತೆಗೆ ಅವರ ಕಾಲು, ತೊಡೆಯ ಭಾಗದಲ್ಲಿ ಕೋಣದ ಕೊಂಬು ಹೊಕ್ಕು ಹೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ತಕ್ಷಣವೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರಿನ ದರ್ಬೆಯ ಹಿತ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related posts

ಚಿತ್ರಾಪುರ: ರಿಕ್ಷಾ ಚಾಲಕನಿಗೆ ತಲವಾರು ದಾಳಿ ನಡೆಸಿದ ಮೂವರ ಬಂಧನ

ಸುಳ್ಯ:NMC ಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ, ಪ್ರತಿಜ್ಞಾವಿಧಿ ಬೋಧನೆ

ಸುಳ್ಯ: ಎರಡನೇ ತರಗತಿ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ