ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ನಿಷಿತ ಸುವರ್ಣ ಇಮೇಜ್ ಕಂಸಲ್ವೆಂಟ್ ಆಯೋಜಿಸಿದ್ದ ಮಿಸ್ಟರ್, ಮಿಸ್ ಹಾಗೂ ಮಿಸಸ್ ಕರ್ನಾಟಕ ಸ್ಪರ್ಧೆಯ ಕರ್ನಾಟಕ ಸ್ಟೈಲ್ ಐಕಾನ್ -2023 ರಲ್ಲಿ ಸುಳ್ಯ ಮೂಲದ, ಮಂಗಳೂರಿನ ಅನನ್ಯ ಶೆಟ್ಟಿ ಅವರು ಬೆಸ್ಟ್ ಐಸ್ ಆಫ್ ಕರ್ನಾಟಕ ಟೈಟಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಅನನ್ಯ ಶೆಟ್ಟಿ ಅವರು ಮಂಗಳೂರಿನ ಅಡ್ಯಾರಿನವರು. ಇವರು ಮಂಗಳೂರು ನಗರದ ಪ್ರತಿಷ್ಠಿತ ಬಂಟ್ಸ್ ಹಾಸ್ಟೆಲ್ ಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಉದ್ಯಾವರ ಉಡುಪಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.ಅನನ್ಯ ಶೆಟ್ಟಿಯವರು ಸುಳ್ಯದ ಸೂರ್ತಿಲ ಭಾಗೀರಥಿ ರೈ ಮತ್ತು ಅಶೋಕ್ ಶೆಟ್ಟಿಯವರ ಸುಪುತ್ರಿಯಾಗಿರುತ್ತಾರೆ.