ಕ್ರೈಂರಾಜ್ಯ

ರಾತ್ರಿ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು..! ಮರದಲ್ಲಿ ನೇತಾಡುತ್ತಿದ್ದ ಬೆಸ್ಕಾಂ ಸಿಬ್ಬಂದಿಯ ಶವ..!

84
Spread the love

ನ್ಯೂಸ್ ನಾಟೌಟ್ : ಕಾರು ಕಾಲುವೆಗೆ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಳಿ ನಡೆದಿದೆ. ಅಪಘಾತದ ತೀವ್ರತೆಗೆ ಪ್ರಯಾಣಿಕರೊಬ್ಬರ ಶವ ಮರದಲ್ಲಿ ನೇತಾಡುತ್ತಿದ್ದುದು ಕಂಡುಬಂದಿದೆ.

ಮೃತಪಟ್ಟವರು ಬೆಸ್ಕಾಂ ಸಿಬ್ಬಂದಿ ಎಂದು ತಿಳಿದುಬಂದಿದೆ. ಇವರನ್ನು ಕೆಪಿಟಿಸಿಎಲ್ ವೇಣಗೋಪಾಲ್ (34), ಶ್ರೀಧರ್ (35) ಹಾಗೂ ಬೆಸ್ಕಾಂ ಲೈನ್‌ಮ್ಯಾನ್ ಮಂಜಪ್ಪ (35) ಎಂದು ಗುರುತಿಸಲಾಗಿದೆ. ರಾತ್ರಿಯೇ ಅಪಘಾತ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆ ಮುಂಜಾನೆವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ. ಬ್ರೆಝಾ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಲುವೆಗೆ ಉರುಳಿದೆ. ಕಾರಿನಲ್ಲಿ ನಾಲ್ವರಿದ್ದು, ಮೂವರು ಮೃತಪಟ್ಟಿದ್ದಾರೆ.

ಒಬ್ಬ ಪ್ರಯಾಣಿಕ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ. ಕಾರು ಕಾಲುವೆಗೆ ಉರುಳುವಾಗ ಬಾಗಿಲು ತೆರೆದು ಹಾರಲು ಯತ್ನಿಸಿದ್ದಾರೆ.ಈ ವೇಳೆ ಒಬ್ಬ ಪ್ರಯಾಣಿಕನ ದೇಹ ಮರದಲ್ಲಿ ಸಿಕ್ಕಿಹಾಕಿಕೊಂಡಿತ್ತು ಎನ್ನಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Click 👇

https://newsnotout.com/2024/06/fake-adhar-identification-for-entry-to-parliament
https://newsnotout.com/2024/06/cinema-and-banned-in-karnataka-and-other-states-for-issue
See also  40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು, ಸಾಯಲು ಟೈಮ್​ ಟೇಬಲ್ ಹಾಕಿ ಪ್ಲಾನ್ ಮಾಡಿದ್ದ ವ್ಯಕ್ತಿ..! Justice Is Due ಎಂದು ಕತ್ತಿಗೆಗೆ ಬೋರ್ಡ್ ಹಾಕಿಕೊಂಡು ಆತ್ಮಹತ್ಯೆ..!
  Ad Widget   Ad Widget   Ad Widget   Ad Widget   Ad Widget   Ad Widget