ಕ್ರೈಂಬೆಂಗಳೂರುವಿಡಿಯೋವೈರಲ್ ನ್ಯೂಸ್

ಬೆಂಗಳೂರಿನಲ್ಲಿ ಬಾಲಕಿ ಮೇಲೆ ಜರ್ಮನ್ ಶೆಫರ್ಡ್ ನಾಯಿ ದಾಳಿ! ಈ ತಿಂಗಳು ಬೆಂಗಳೂರಿನಲ್ಲಿ ನಡೆದ ಮೂರನೇ ಭೀಕರ ನಾಯಿ ದಾಳಿ! ಇಲ್ಲಿದೆ ವೈರಲ್ ವಿಡಿಯೋ

348

ನ್ಯೂಸ್ ನಾಟೌಟ್‌: ಬೆಂಗಳೂರಿನ ಕೆಆರ್ ಪುರಂನಲ್ಲಿ ಬಾಲಕಿಯ ಮೇಲೆ ಸಾಕುನಾಯಿವೊಂದು ಜೂನ್ 28 ರಂದು ಏಕಾಏಕಿ ದಾಳಿ ಮಾಡಿದೆ. ಈ ತಿಂಗಳು ಬೆಂಗಳೂರಿನಲ್ಲಿ ನಡೆದ ಮೂರನೇ ಘಟನೆ ಇದಾಗಿದೆ. ಬೆಂಗಳೂರಿನ ಕೆಆರ್ ಪುರಂನಲ್ಲಿ ತನ್ನ ಮನೆ ಬಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಮೇಲೆ ನೆರೆಹೊರೆಯವರ ಜರ್ಮನ್ ಶೆಫರ್ಡ್ ನಾಯಿ ದಾಳಿ ಮಾಡಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳೆ ಗೇಟ್ ತೆರೆದಾಗ ರಸ್ತೆಯ ಮೂಲಕ ಹಾದು ಹೋಗುತ್ತಿದ್ದ ಪುಟ್ಟ ಬಾಲಕಿ ಮನೆಯ ಮುಂದೆ ನಿಂತಿದ್ದಳು ಮತ್ತು ಜರ್ಮನ್ ಶೆಫರ್ಡ್ ತಕ್ಷಣ ಬಾಲಕಿ ಮೇಲೆ ದಾಳಿ ಮಾಡಿದೆ. ಇದನ್ನು ನೋಡಿದ ಮಹಿಳೆ ಬಾಲಕಿ ರಕ್ಷಣೆಗಾಗಿ ಓಡಿ ಹೋಗುತ್ತಾಳೆ. ಅಷ್ಟರಲ್ಲಿ ಬಾಲಕಿ ತಾಯಿ ನಾಯಿಯಿಂದ ಬಾಲಕಿಯನ್ನು ರಕ್ಷಿಸಲು ಯತ್ನಿಸುತ್ತಾಳೆ.

ಬಾಲಕಿ ಕಿರುಚಾಡುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ನಿವಾಸಿಗಳು ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ನಾಯಿಯಿಂದ ಬಾಲಕಿಯನ್ನು ಬಿಡಿಸುತ್ತಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

See also  ದೇವರ ಮೂರ್ತಿ ಕದ್ದು ದೇವಸ್ಥಾನಕ್ಕೆ ವಾಪಸ್ ತಂದಿಟ್ಟ ಕಳ್ಳನಿಗೆ ಆಗಿದ್ದೇನು..! ಕ್ಷಮಾಪಣಾ ಪತ್ರದಲ್ಲಿ ಬಿಚ್ಚಿಟ್ಟ ಪವಾಡಗಳೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget