ಕ್ರೈಂಬೆಂಗಳೂರು

ಮತದಾನ ಹೊತ್ತಲ್ಲಿ ಶಾಲೆಗೆ ಬಾಂಬ್ ಬೆದರಿಕೆ‌! ಈ ಖಾಸಗಿ ಶಾಲೆಗೆ ಬಂದಿತ್ತು ಅನಾಮದೇಯ ಇ-ಮೇಲ್!

ನ್ಯೂಸ್ ನಾಟೌಟ್:  ಚುನಾವಣಾ ಕೆಲಸಕ್ಕೆ ಶಾಲೆಗಳು ಮತಗಟ್ಟೆಗಳಾಗಿ ಬದಲಾಗುತ್ತಿರುವ ಹೊತ್ತಿನಲ್ಲೇ ಬೆಂಗಳೂರು ನಗರದ ಖಾಸಗಿ ಶಾಲೆಯೊಂದಕ್ಕೆ ಬಾಂಬ್​ ಬೆದರಿಕೆ ಬಂದಿರುವುದು ಆನೇಕಲ್ ನಲ್ಲಿ ಮಂಗಳವಾರ ವರದಿಯಾಗಿದೆ. 

ಬೆಳಗ್ಗೆ 7.05ಕ್ಕೆ ಶಾಲೆಗೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಸ್ಫೋಟಕ ಡಿವೈಸ್ ಶಾಲಾ ಕಟ್ಟದಲ್ಲಿ ಅಳವಡಿಸಿದೆ ಎಂದು ಆ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು, ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಶಾಲೆಯ ಆವರಣದ ಪರಿಶೀಲನೆಯಲ್ಲಿ ನಡೆಸಿದ್ದಾರೆ.

ಕಳೆದ ಬಾರಿಯೂ ಇಂತಹ ಪ್ರಕರಣ ದಾಖಲಾಗಿದ್ದು ಹೆಬ್ಬಗೋಡಿ ಪೊಲೀಸರು ದೂರು ದಾಖಲಿಸಿದ್ದರು. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿ ಕಾರ್ಜುನ ಬಾಲದಂಡಿ, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮಿನಾರಾಯಣ ತಂಡ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಅರಂಬೂರು: ರಿಕ್ಷಾ, ಬೈಕ್ ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ

ರ‍್ಯಾಗಿಂಗ್‌: ಬೇಸತ್ತು ವೈದ್ಯಕೀಯ ವಿದ್ಯಾರ್ಥಿನಿ ದಾರುಣ ಅಂತ್ಯ !

ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ,ಲೋಕಾರ್ಪಣೆಗೆ ಸಿದ್ದವಾಗಿರುವ ಕಟ್ಟಡದ ನಿರ್ಮಾಣ ಕಾರ್ಯ ಹೇಗಿದೆ?