ಕ್ರೀಡೆ/ಸಿನಿಮಾಬೆಂಗಳೂರು

ಬೆಂಗಳೂರಿಗೆ ಭೇಟಿ ನೀಡಿದ ರಜಿನಿಕಾಂತ್‌, BMTC ಡಿಫೋದಲ್ಲಿ ಕುಳಿತು ಹಳೆ ನೆನಪು ಮೆಲುಕು ಹಾಕಿದ ತಲೈವಾ

166

ನ್ಯೂಸ್ ನಾಟೌಟ್: ಈ ಮೊದಲು ಬಿಎಂಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿ ಇದೀಗ ತಮ್ಮ ಹಳೆಯ ನೆನಪು ಮೆಲುಕು ಹಾಕಿದ್ದಾರೆ. ಸೂಪರ್‌ ಸ್ಟಾರ್‌ ರಜಿನಿಕಾಂತ್‌ ʼಜೈಲರ್‌ʼ ಸಿನಿಮಾ ಹಿಟ್‌ ಆದ ಸಂತಸದಲ್ಲಿದ್ದಾರೆ. ಸಿನಿಮಾ ಥಿಯೇಟರ್‌ ನಲ್ಲಿ ಇನ್ನು ಕೂಡ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಈ ನಡುವೆ ರಜಿನಿಕಾಂತ್‌ ಬೆಂಗಳೂರಿಗೆ ಭೇಟಿ ನೀಡಿದ್ದಾರೆ.

ಸಿನಿಮಾರಂಗಕ್ಕೆ ಬರುವ ಮುನ್ನ ರಜಿನಿಕಾಂತ್‌ ಬೆಂಗಳೂರಿನಲ್ಲಿ ಹತ್ತಾರು ವರ್ಷ ನೆಲೆಸಿದ್ದರು. ಬಸ್‌ ಕಂಡೆಕ್ಟರ್‌ ಬದುಕನ್ನು ಸಾಗಿಸುತ್ತಿದ್ದರು. ಇಂದಿಗೂ ಅವರು ಕನ್ನಡವನ್ನು ಸೊಗಸಾಗಿ ಮಾತನಾಡುತ್ತಾರೆ. ಕನ್ನಡ ಹಾಗೂ ಅನ್ನ ಕೊಟ್ಟ ಕರ್ನಾಟಕದ ಬಗ್ಗೆ ಅವರಿಗೆ ಇಂದಿಗೂ ಹೆಮ್ಮಯಿದೆ. ಎಷ್ಟೇ ದೊಡ್ಡ ಸೂಪರ್‌ ಸ್ಟಾರ್‌ ಆಗಿದ್ದರೂ ಅವರು ಇಂದಿಗೂ ತನ್ನ ಸರಳತನವನ್ನು, ಹಳೆ ದಿನದ ಕಷ್ಟವನ್ನು ಮರೆತಿಲ್ಲ.

ʼಜೈಲರ್ʼ ಸಿನಿಮಾದ ಜನಮನವನ್ನು ಗೆದ್ದಿರುವ ಖುಷಿಯಲ್ಲಿ ರಜಿನಿಕಾಂತ್‌ ಇದ್ದಾರೆ. ಈ ನಡುವೆ ಮಂಗಳವಾರ(ಆ.29 ರಂದು) ರಜಿನಿಕಾಂತ್‌ ಕಂಡೆಕ್ಟರ್‌ ಆಗಿ ಕೆಲಸ ಮಾಡಿದ್ದ ಜಯನಗರ ಡಿಪೋಗೆ ದಿಢೀರ್‌ ಭೇಟಿ ನೀಡಿದ್ದಾರೆ.

ಜಯನಗರ ಡಿಪೋಗೆ ಭೇಟಿ ನೀಡಿ, ಅಲ್ಲಿನ ಚಾಲಕರು, ಸಿಬ್ಬಂದಿಗಳೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆದು, ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ತಲೈವಾ ಭೇಟಿಗೆ ಡಿಪೋ ಚಾಲಕರು ಹಾಗೂ ಸಿಬ್ಬಂದಿಗಳು ಫುಲ್‌ ಖುಷ್‌ ಆಗಿದ್ದಾರೆ. ಅವರೊಂದಿಗೆ ಫೋಟೋ, ಸೆಲ್ಫಿಗಳನ್ನು ತೆಗೆದುಕೊಂಡಿದ್ದಾರೆ.

ಬಸ್‌ ಚಾಲಕರು ಹಾಗೂ ಸಿಬ್ಬಂದಿಗಳೊಂದಿಗೆ ಕೂತು ರಜಿನಿಕಾಂತ್‌ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಸೂಪರ್‌ ಸ್ಟಾರ್‌ ಬೆಂಗಳೂರು ಭೇಟಿಯ ಫೋಟೋ, ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಇದಾದ ಬಳಿಕ ರಜನಿಕಾಂತ್ ತಮ್ಮ ನೆಚ್ಚಿನ ಸ್ಥಳಗಳಾದ ರಾಘವೇಂದ್ರ ಸ್ವಾಮೀ ದೇವಸ್ಥಾನ , ವಿದ್ಯಾರ್ಥಿ ಭವನ , ರಜಿನಿ ಓದಿದ ಶಾಲೆ ಹೀಗೆ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

See also  ಲೋಕ ಸಮರದಲ್ಲಿ ಗೆದ್ದ ಖುಷಿಗೆ ಸಂಸದ ಸುಧಾಕರ್ ನಿಂದ ಎಣ್ಣೆ, ಬಾಡೂಟ..! ಬಿಯರ್ ಹಾಗೂ ಹಾಟ್ ಡ್ರಿಂಕ್ಸ್ ಗೆ ಮುಗಿಬಿದ್ದ ಜನ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget