ಬೆಂಗಳೂರುವೈರಲ್ ನ್ಯೂಸ್

ಆಕೆ ದಿನಾ ಪಕ್ಕದ ಮನೆಯ ರಂಗೋಲಿ ಅಳಿಸ್ತಾಳೆ, ಚಪ್ಪಲಿ ಸ್ಟ್ಯಾಂಡ್‌ ಬೀಳಿಸ್ತಾಳೆ..! ದಂಪತಿಗಳ ಗೋಳು ಕೇಳುವವರೇ ಇಲ್ಲ..!

ನ್ಯೂಸ್ ನಾಟೌಟ್: ಪಕ್ಕದ ಮನೆಯ ಯುವತಿ ನಿತ್ಯ ಮನೆ ಮುಂದಿನ ರಂಗೋಲಿಯನ್ನು ತುಳಿದು ಅಳಿಸಿ ಹಾಕಿ, ಕಿರುಕುಳ ನೀಡುತ್ತಿದ್ದಾಳೆ ಎಂದು ದಂಪತಿ ದೂರಿದ್ದಾರೆ. ನೆರೆ-ಹೊರೆಯವರ ಗಲಾಟೆ ಪ್ರಕರಣವು ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ಅಪಾರ್ಟಮೆಂಟ್‌ನಲ್ಲಿ ನಡೆದಿದೆ.

ಪಕ್ಕದ ಮನೆಯಾಕೆ ರಂಗೋಲಿ ಅಳಿಸುವುದು, ಶೂ ರ್ಯಾಕ್ ಅನ್ನು ಕಾಲಿನಲ್ಲಿ ಒದ್ದು ಬೀಳಿಸುತ್ತಿದ್ದಾಳೆ. ಈ ರೀತಿ ಸಾಕಷ್ಟು ಬಾರಿ ಮಾನಸಿಕ ಕಿರಿಕುಳ ನೀಡುತ್ತಿದ್ದಾಳೆ ಎಂದು ಸರಿತಾ ಎಂಬಾಕೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೊ ಪೋಸ್ಟ್‌ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈಕೆಯಿಂದ ಮಾನಸಿಕವಾಗಿ ಕಿರುಕುಳವಾಗುತ್ತಿದೆ. ಪ್ರತಿ ದಿನ ಜಗಳವಾಡಲು ಆಗುವುದಿಲ್ಲ.

ಪ್ರಶ್ನೆ ಮಾಡಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾಳೆ ಎಂದು ಸರಿತಾ ಶಿಂಧೆ ಪೋಸ್ಟ್‌ ಮಾಡಿದ್ದಾರೆ. ಇನ್ನೂ ನಾವು ದೂರು ಕೊಟ್ಟರೆ ಪೊಲೀಸರು ಎನ್‌ಸಿಆರ್ ಮಾಡುತ್ತಾರೆ. ಆದರೆ ನಮ್ಮ ಮೇಲೆ ಪ್ರತಿ ದೂರು ಕೊಟ್ಟರೆ ಎಫ್ಐಆರ್ ಮಾಡುತ್ತಾರೆ ಎಂದು ದಂಪತಿ ದೂರಿದ್ದಾರೆ ಎಂದು ವರದಿ ತಿಳಿಸಿದೆ.

Related posts

ವೀಸಾ ಕೇಂದ್ರದ ಟಿವಿಯಲ್ಲಿ ಅಶ್ಲೀಲ ಸಿನಿಮಾ ಪ್ರದರ್ಶನ..! ಮುಂದೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ

ಕೇರಳ ಸ್ಟೋರಿ ನಟಿ ಆದಾ ಶರ್ಮಾ ಆಸ್ಪತ್ರೆ ದಾಖಲು..! ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ! ಅಷ್ಟಕ್ಕೂ ನಟಿಗೇನಾಯ್ತು?

ಬೋರ್ಡ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ..! ಪ್ರಶ್ನಾಪತ್ರಿಕೆಯನ್ನು ವಾಟ್ಸಾಪ್ ಗ್ರೂಪ್ ಗಳಿಗೆ ಹಾಕಿದ್ಯಾರು..?