ಕ್ರೈಂವೈರಲ್ ನ್ಯೂಸ್

29ನೇ ಮಹಡಿಯಿಂದ ಹಾರಿದ 12 ರ ಬಾಲಕಿ..! 6 ನೇ ತರಗತಿಯ ಬಾಲಕಿಯ ನಿಗೂಢ ಸಾವಿಗೆ ಕಾರಣವೇನು..?

207

ನ್ಯೂಸ್ ನಾಟೌಟ್: 29ನೇ ಮಹಡಿಯಿಂದ ಬಿದ್ದು 12ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬೇಗೂರು ಬಳಿಯ ಅಪಾರ್ಟ್‍ಮೆಂಟ್ ಒಂದರಲ್ಲಿ ನಡೆದಿದೆ.

ಬಾಲಕಿ ಅಪಾರ್ಟ್‍ಮೆಂಟ್‍ನಲ್ಲಿ ತಂದೆ – ತಾಯಿ ಜೊತೆ ವಾಸವಾಗಿದ್ದಳು ಎನ್ನಲಾಗಿದ್ದು. ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಳು ಎನ್ನಲಾಗಿದೆ. ಬಾಲಕಿಯ ತಂದೆ ಸಾಫ್ಟ್‌ವೇರ್‌ ಎಂಜಿನಿಯರ್, ತಾಯಿ ಗೃಹಿಣಿ ಎಂದು ಮಾಹಿತಿ ದೊರಕಿದೆ.

ಬಾಲಕಿಯ ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ.
ಬಾಲಕಿ ಮಂಗಳವಾರ(ಜ.೨೩) ರಾತ್ರಿ ಮಲಗಿದ್ದವಳು, ಇದ್ದಕ್ಕಿದ್ದಂತೆ ಮುಂಜಾನೆ 4:30ಕ್ಕೆ ಎದ್ದು ಹಾಲ್‍ಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನು ಆಕೆಯ ತಾಯಿ ವಿಚಾರಿಸಿದಾಗ, ಸರಿಯಾಗಿ ಉತ್ತರಿಸದೆ ಮತ್ತೆ ಮಲಗುವುದಾಗಿ ರೂಮಿಗೆ ತೆರಳಿದ್ದಳು. ಸುಮಾರು 5 ಗಂಟೆ ವೇಳೆಗೆ ಬಾಲಕಿ ಅಪಾರ್ಟ್‍ಮೆಂಟ್ ಮೇಲಿನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಜೋರಾದ ಶಬ್ದ ಕೇಳಿ ಸೆಕ್ಯೂರಿಟಿ ಹೊರಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಪೋಷಕರಿಗೆ ಹಾಗೂ ಅಪಾರ್ಟ್‍ಮೆಂಟ್ ಅಸೋಸಿಯೇಷನ್‍ಗೆ ಸೆಕ್ಯೂರಿಟಿ ಮಾಹಿತಿ ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

https://newsnotout.com/2024/01/ram-rally-issue/
See also  ಇಂದು(ಮಾ.29) ಈ ವರ್ಷದ ಮೊದಲ ಸೂರ್ಯ ಗ್ರಹಣ, ಯುಗಾದಿಗೂ ಮೊದಲು ಬಂದ ಸೂರ್ಯ ಗ್ರಹಣದಿಂದ ಧಾರ್ಮಿಕ ಮಹತ್ವ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget