ಕ್ರೈಂಬೆಂಗಳೂರುವೈರಲ್ ನ್ಯೂಸ್

ಐಫೋನ್ ಗಾಗಿ ಮನೆ ತೊರೆದರೇ ಮಕ್ಕಳು? ಬೆಂಗಳೂರಿನ ಹುಡುಗರು ಗೋವಾದಲ್ಲಿ ಪತ್ತೆಯಾಗಿದ್ದು ಹೇಗೆ?

203

ನ್ಯೂಸ್ ನಾಟೌಟ್: ಐಫೋನ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಮನೆ ತೊರೆದಿದ್ದ ಬೆಂಗಳೂರಿನ ಇಬ್ಬರು ಬಾಲಕರು ಗೋವಾದಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಗಳೂರಿನ ನಾಗಶೆಟ್ಟಿಯಲ್ಲಿ ವಾಸವಾಗಿದ್ದ ಈ ಬಾಲಕರು ಸೆಪ್ಟೆಂಬರ್ 1 ರಂದು ಮನೆ ಬಿಟ್ಟು ಹೋಗಿದ್ದರು.

ಬಾಲಕರಿಗಾಗಿ ತೀವ್ರ ಹುಡುಕಾಟ ನಡೆಸಿದ್ದ ಪೋಷಕರು ಬಳಿಕ ಈ ಕುರಿತಂತೆ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ತಿಳಿದುಬಂದಿದೆ.
ಆನ್ಲೈನ್ ತರಗತಿಗೆ ಹಾಜರಾಗುವ ಸಲುವಾಗಿ ಈ ಬಾಲಕರಿಗೆ ಪೋಷಕರು ಸ್ಮಾರ್ಟ್ ಫೋನ್ ಕೊಡಿಸಿದ್ದು, ಆದರೆ ತಮಗೆ ಐಫೋನ್ ಬೇಕೆಂದು ಹಠ ಹಿಡಿದಿದ್ದರು ಎನ್ನಲಾಗಿದೆ.

ಅಷ್ಟೊಂದು ಹಣ ಇಲ್ಲವೆಂದು ಹೇಳಿದಾಗ ಕೋಪಗೊಂಡು ಈ ಬಾಲಕರು ಮನೆ ತೊರೆದಿದ್ದು, ಗೋವಾಗೆ ಹೋದ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ವಿಚಾರಣೆ ನಡೆಸಿದಾಗ ಮನೆ ಬಿಟ್ಟು ಬಂದ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ಪೊಲೀಸರು ಅವರನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ.

See also  ಬಿಹಾರದಲ್ಲಿ ಖರ್ಗೆ ಹೆಲಿಕಾಪ್ಟರ್ ತಡೆದ ಚುನಾವಣಾಧಿಕಾರಿಗಳು..! ಹೆಲಿಕಾಪ್ಟರ್ ಅನ್ನು ಸುತ್ತುವರಿದ ಪೊಲೀಸರು ಮತ್ತು ಅಧಿಕಾರಿಗಳು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget