ಕ್ರೈಂಬೆಂಗಳೂರುವೈರಲ್ ನ್ಯೂಸ್

ಯುವಕನ ತಲೆಯಿಂದ ಗುಂಡು ಹೊರತೆಗೆದದ್ದೇಗೆ ಬೆಂಗಳೂರಿನ ವೈದ್ಯರು? ಆತನ ತಲೆಗೆ ಗುಂಡು ಹೊಕ್ಕು 18 ವರ್ಷ ಜೀವಂತವಾಗಿದ್ದದ್ದೇಗೆ ಆತ? ಏನಿದು ಘಟನೆ?

ನ್ಯೂಸ್ ನಾಟೌಟ್: 29 ವರ್ಷ ವಯಸ್ಸಿನ ಯೆಮೆನ್‌ ಯುವಕನ ತಲೆಯೊಳಗೆ 18 ವರ್ಷದಿಂದ ಬಾಕಿ ಉಳಿದಿದ್ದ ಬಂದೂಕಿನ ಗುಂಡನ್ನು ಹೊರತೆಗೆಯುವಲ್ಲಿ ಬೆಂಗಳೂರಿನ ವೈದ್ಯರು ಯಶಸ್ವಿಯಾಗಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.

ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುವ ವೇಳೆ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಈ ಯುವಕನ ತಲೆಯೊಳಗೆ ಬಂದೂಕಿನ ಗುಂಡು ನುಗ್ಗಿತ್ತು. ಆಗ ಈ ಯುವಕನ ವಯಸ್ಸು 10 ವರ್ಷ ಇತ್ತಷ್ಟೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

ಯುವಕನ ಹೆಸರು ಸಲೇಹ್‌. ಎರಡು ಮಕ್ಕಳ ತಂದೆ. ಗುಂಡು ತಲೆಯಲ್ಲಿದ್ದ ಕಾರಣ ಸಲೇಹ್‌ಗೆ ಕಿವಿ ಕೇಳ್ತಾ ಇರಲಿಲ್ಲ. ಪದೇಪದೆ ತಲೆನೋವು, ಕಿವಿ ಸೋರುವಿಕೆ ಸಮಸ್ಯೆ ಎದುರಾಗುತ್ತಿತ್ತು ಎನ್ನಲಾಗಿದೆ. ಇದಕ್ಕೆ ಪರಿಹಾರ ಹುಡುಕಿಕೊಂಡು ಸಲೇಹ್ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಬಂದು ದಾಖಲಾಗಿದ್ದರು ಎನ್ನಲಾಗಿದೆ.
ಎಡಕಿವಿಯ ಒಳಗೆ ಹೋಗಿರುವ 3 ಸೆಂಟಿ ಮೀಟರ್ ಉದ್ದದ ಗುಂಡು ಕಿವಿ ತಮಟೆ ಹಾನಿಗೊಳಿಸಿ ಎಲುಬಿಗೆ ಕಚ್ಚಿಕೊಂಡಿತ್ತು.ಇದರ ಪರಿಣಾಮ ಕಿವಿ ಸೋಂಕು ಉಂಟಾಗಿ ಪದೇಪದೆ ಕಿವಿ ಸೋರುವಿಕೆ ಕಾರಣವಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಸಲೇಹ್‌ ತಂದೆ ಕೃಷಿಕ. ತಾಯಿ ಗೃಹಿಣಿ. 10 ಮಕ್ಕಳ ಪೈಕಿ ಸಲೇಹ್ ಒಬ್ಬ. ಮೂವರು ಸಹೋದರಿಯರು. ಸಲೇಹ್ 10 ವರ್ಷದವನಿದ್ಧಾಗ ಮನೆ ಸಮೀಪದ ಅಂಗಡಿಗೆ ಹೋಗಿ ಹಿಂದಿರುಗುವಾಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಆಗ ಅವರು ಹಾರಿಸಿದ ಗುಂಡು ಸಲೇಹ್ ಕಿವಿಯೊಳಗೆ ಹೋಗಿತ್ತು. ಕಿವಿಯಿಂದ ರಕ್ತ ಸುರಿಯಿತ್ತಿದ್ದ ಸಲೇಹ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಅಲ್ಲಿ ಕಿವಿ ಕ್ಲೀನ್ ಮಾಡಿ ಔಷಧಕೊಟ್ಟು ಕಳುಹಿಸಿದ್ದರು. ಕಿವಿಯೊಳಗೆ ಹೋದ ಗುಂಡನ್ನು ಗುರುತಿಸಿರಲಿಲ್ಲ.
ಗುಂಡ ತಲೆಯೊಳಗೆ ಬಾಕಿ ಇರುವುದು ಯಾರ ಗಮನಕ್ಕೂ ಬಾರದೇ ಹೋಯಿತು. ಪದೇಪದೆ ಕಾಡುವ ತಲೆನೋವು, ಕಿವಿ ಸೋರುವಿಕೆ ಸಮಸ್ಯೆಗೆ ಪರಿಹಾರ ಹುಡುಕುತ್ತ ಬೆಂಗಳೂರಿಗೆ ಬಂದ್ದಿದ್ದರು. ತಲೆಯನ್ನು ಪರಿಶೀಲಿಸಿದಾಗ ಗುಂಡು ಇರುವುದು ಪತ್ತೆಯಾಗಿತ್ತು. ಕೊನೆಗೆ ಆಸ್ಟರ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಆ ಗುಂಡನ್ನು ಹೊರತೆಗೆದಿದೆ ಎಂದು ವರದಿ ತಿಳಿಸಿದೆ.

Related posts

ತರಗತಿಯ ಕೊಠಡಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ ಪ್ರಾಧ್ಯಾಪಕಿ..! ಪ್ರಾಂಶುಪಾಲರಿಂದ ಶಿಕ್ಷಕಿಗೆ ಕಿರುಕುಳ ಆರೋಪ..!

ಶ್ರೀ ರಾಮನ ಶೋಭಯಾತ್ರೆ ವೇಳೆ ಕಲ್ಲು ತೂರಾಟ..! ಅಶ್ರುವಾಯು ಸಿಡಿಸಿದ ಪೊಲೀಸರು, ಇಲ್ಲಿದೆ ವೈರಲ್ ವಿಡಿಯೋ

ಬಿಯರ್‌ ಸೇವಿಸಿ ಇಬ್ಬರು ಕಾನ್‌ ಸ್ಟೆಬಲ್‌ಗಳ ದುರಂತ ಅಂತ್ಯ..? ರಾತ್ರೋರಾತ್ರಿ ಇಬ್ಬರಿಗೂ ವಾಂತಿ-ಭೇದಿ..!