ಕ್ರೈಂಬೆಂಗಳೂರುವೈರಲ್ ನ್ಯೂಸ್

ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದರೇ ತಂದೆ..! ಚಿಕನ್ ಅಂಗಡಿ ಇಟ್ಟುಕೊಂಡಿದ್ದ ತಂದೆ ರಾತ್ರೋರಾತ್ರಿ ಮಗಳನ್ನೇ ಕತ್ತರಿಸಿದ್ದೇಕೆ? ಮುಂದೇನಾಯ್ತು?

182

ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ವಿಚಿತ್ರ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳೆಂದು ತಂದೆಯೇ ಮಗಳ ಕತ್ತು ಕೊ* ಯ್ದು ಕೊ* ಲೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ದೇವನಹಳ್ಳಿ ತಾಲೂಕಿನ ಬಿದ್ದಲಪುರ ಗ್ರಾಮದಲ್ಲಿ ನಡೆದಿದೆ.

ಯುವತಿ ಕವನ (20) ಮೃತ ಪಟ್ಟಿದ್ದು, ತಂದೆ ಮಂಜುನಾಥ್ ಎಂಬವರು(47) ಕೊ* ಲೆ ಮಾಡಿ ಪೋಲಿಸರಿಗೆ ಶರಣಾಗಿದ್ದಾರೆ. ಮಗಳು ಪ್ರೀತಿ ಮಾಡುತ್ತಿದ್ದ ವಿಷಯ ತಿಳಿದು ಆಕ್ರೋಶಗೊಂಡಿದ್ದ ತಂದೆ, ಮಗಳನ್ನ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ವಿಶ್ವನಾಥಪುರ ಪೋಲಿಸರು ಭೇಟಿ ಪರಿಶೀಲಿಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕೊಲೆ ಆರೋಪಿ ಮಂಜುನಾಥ್‌ ಕಿರಿಯ ಮಗಳು ಪ್ರೀತಿಸಿ ಬೇರೊಬ್ಬ ಯುವಕನೊಂದಿಗೆ ಪರಾರಿಯಾಗಿದ್ದಳು.

ಈ ಹಿನ್ನೆಲೆಯಲ್ಲಿ ಹಿರಿಯ ಮಗಳ ಜೊತೆ ತಡರಾತ್ರಿ ಗಲಾಟೆ ನಡೆದಿತ್ತು. ಚಿಕ್ಕವಳು ಓಡಿ ಹೋದಳು, ನೀನೂ ಸಹ ಅನ್ಯಜಾತಿ ಯವಕನನ್ನ ಪ್ರೀತಿ ಮಾಡ್ತಿದ್ದೀಯಾ? ನಾವು ಊರಲ್ಲಿ ಹೇಗೆ ಮರ್ಯಾದೆಯಿಂದ ಒಡಾಡಬೇಕು ಅಂತಾ ಮಗಳನ್ನ ಕೊಂದೇ ಬಿಟ್ಟಿದ್ದಾರೆ.

ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ್, ಕೋಳಿ ಕತ್ತರಿಸುವ ಕತ್ತಿಯಿಂದಲೇ ಮಗಳ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿ ತಿಳಿಸಿದೆ.

See also  ಆರ್‌ ಸಿಬಿ ಫ್ರಾಂಚೈಸಿ ಮತ್ತು ಕೆಎಸ್‌ ಸಿಎ ವಿರುದ್ಧ FIR..! ವಿಜಯೋತ್ಸವ ಆಚರಣೆಗೆ KSCA ಕೇಳಿದ ಒಪ್ಪಿಗೆಯನ್ನು ಸರ್ಕಾರ ತಯಾರಿಯೇ ಇಲ್ಲದೆ ಅನುಮತಿ ನೀಡಿತ್ತು..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget