ಬೆಂಗಳೂರುವೈರಲ್ ನ್ಯೂಸ್

ಬೆಂಗಳೂರಿನ ದೇಗುಲಗಳಲ್ಲಿ ಹೊಸ ವಸ್ತ್ರಸಂಹಿತೆ..! ತುಂಡು ಬಟ್ಟೆ ಧರಿಸಿದ್ರೆ ಪ್ರವೇಶ ನಿಷಿದ್ಧ! ಇಲ್ಲಿದೆ ಸಂಪೂರ್ಣ ಮಾಹಿತಿ

233

ನ್ಯೂಸ್ ನಾಟೌಟ್: ಇಂದಿನಿಂದ(ಜ.10) ರಾಜಧಾನಿಯ ಬೆಂಗಳೂರಿನ (Bengaluru) ದೇವಾಲಯಗಳಲ್ಲಿ ಅಧಿಕೃತವಾಗಿ ವಸ್ತ್ರಸಂಹಿತೆ(Dress Code) ಜಾರಿಯಾಗುತ್ತಿದೆ. ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಕುರಿತು ಕರ್ನಾಟಕ ದೇವಸ್ಥಾನ-ಮಠ, ಧಾರ್ಮಿಕ ಸಂಸ್ಥೆಗಳ ಮಹಾಸಂಘ ಇಂದಿನಿಂದ ಅಭಿಯಾನ ನಡೆಸಲಿದೆ ಎಂದು ವರದಿ ತಿಳಿಸಿದೆ.

ಇಂದು (ಜ.10) ಮಧ್ಯಾಹ್ನ 12 ಗಂಟೆಗೆ ವಸಂತನಗರದ ಶ್ರೀಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ದೇಗುಲಗಳಿಗೆ ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಭಾರತೀಯ ಉಡುಪು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಕರ್ನಾಟಕ ದೇವಸ್ಥಾನ ಮಹಾಸಂಘ ದೇಗುಲಗಳ ಮುಂದೆ ಬೋರ್ಡ್ ಹಾಕಲಿದೆ.

ದೇವಾಲಯದ ಒಳಗೆ ವಸ್ತ್ರಸಂಹಿತೆ ಪಾಲಿಸುವಂತೆ, ವಿದೇಶಿ ಉಡುಪುಗಳು ಹಾಗೂ ತುಂಡುಡುಗೆ ಧರಿಸಿದವರಿಗೆ ದೇವಾಲಯದೊಳಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಈ ಹಿಂದೆ ಒತ್ತಾಯಿಸಿತ್ತು. ಇದಕ್ಕೆ ಹಿಂದೂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ದೇವಾಲಯಗಳ ಒಳಗೆ ತುಂಡು ಬಟ್ಟೆಗಳನ್ನು ಧರಿಸಿ ಬರುವ ಯುವಕ ಯುವತಿಯರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಲಾಗಿತ್ತು.

ಈ ವಸ್ತ್ರಸಂಹಿತೆ ಪ್ರಕಾರ ಪುರುಷರು ದೇವಾಯಕ್ಕೆ ಚಡ್ಡಿ, ಬರ್ಮುಡಾ, ಹರಿದ ಜೀನ್ಸ್​, ಎದೆ ಕಾಣುವ ಟಿಶರ್ಟ್​ ಧರಿಸಿಕೊಂಡು ಬರುವಂತಿಲ್ಲ. ಮಹಿಳೆಯರು ಸ್ಕರ್ಟ್, ಮಿಡಿ, ಹರಿದ ಜೀನ್ಸ್, ಶಾರ್ಟ್ಸ್ ಹಾಕಿಕೊಂಡು ಬರುವಂತಿಲ್ಲ. ಒಂದು ವೇಳೆ ಬಂದರೆ ದೇವಳಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

ಈ ಸಂಬಂಧ ಕಳೆದ ತಿಂಗಳು ರಾಜ್ಯದ ಎಲ್ಲ ದೇವಾಲಯ ಮತ್ತು ಮಠಗಳ ಅರ್ಚಕರು ಮತ್ತು ಟ್ರಸ್ಟಿಗಳು ಸಭೆ ನಡೆಸಿದ್ದರು. ಈ ಸಭೆಯಲ್ಲಿ ರಾಜ್ಯದ ಎಲ್ಲ ಅರ್ಚಕರು ಹಾಗೂ ಟ್ರಸ್ಟಿಗಳು ಜನವರಿಯಿಂದ ಈ ನಿಯಮವನ್ನು ಜಾರಿ ಮಾಡಬೇಕೆಂದು ತೀರ್ಮಾನಿಸಿದ್ದರು. ಹೀಗಾಗಿ ಇಂದಿನಿಂದ ಬೆಂಗಳೂರಿನ ರಾಜ್ಯದ ಎಲ್ಲ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ ಎಂದು ವರದಿ ತಿಳಿಸಿದೆ.

https://newsnotout.com/2024/01/katera-in-dubai/
See also  ದಕ್ಷಿಣ ಕನ್ನಡ: ರಾತ್ರಿ ಸ್ನಾನಕ್ಕೆಂದು ಬಾತ್ ರೂಮ್ ಒಳಗೆ ಹೋದವ ಮತ್ತೆ ಬರಲೇ ಇಲ್ಲ..! ಬಾಗಿಲು ಒಡೆದವರಿಗೆ ಕಾದಿತ್ತು ಶಾಕ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget