ಕರಾವಳಿಕೊಡಗು

ಟ್ರಾಫಿಕ್ ಜಾಮ್‌ನಲ್ಲೇ ಊಟ ಮುಗಿಸಿದ ಬಿಎಂಟಿಸಿ ಬಸ್ ಚಾಲಕ..! ವಿಡಿಯೋ ವೈರಲ್

293

ನ್ಯೂಸ್ ನಾಟೌಟ್ : ಬೆಂಗಳೂರು ಟ್ರಾಫಿಕ್ ಜಾಮ್ ನಲ್ಲಿ ಒಮ್ಮೆ ಸಿಕ್ಕಿ ಹಾಕೊಂಡ್ರೆ ಮತ್ತೆ ಪ್ರಯಾಣ ಮುಂದುವರಿಸಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇಲ್ಲಿ ದಿನ ನಿತ್ಯ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಬೇಜಾರಾದವರು ಅದೆಷ್ಟೋ ಮಂದಿ. ಈ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಗಂಟೆಗಟ್ಟಲೆ ಕಾಯುವ ಬದಲು ನಾನು ಆ ಕೆಲಸ ಮಾಡಿ ಮುಗಿಸುತ್ತಿದ್ದೆ, ಈ ಕೆಲಸ ಮುಗಿಸುತ್ತಿದ್ದೆ ಎಂದು ಯೋಚನೆ ಮಾಡುವವರು ಇದ್ದಾರೆ. ಆದರೆ ಇಲ್ಲೊಬ್ಬರು ಇದೇ ಸಂದರ್ಭವನ್ನು ಹೇಗೆ ಬಳಸಿಕೊಂಡ್ರು ನೋಡಿ..

ಹೌದು, ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿ ಪ್ರಯಾಣ ಮುಂದುವರಿಸಲು ಕಾಯುತ್ತಿದ್ದ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲಕರ ಆಸನದಲ್ಲಿಯೇ ಊಟ ಮುಗಿಸಿದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.ಬೆಂಗಳೂರಿನ ಟ್ರಾಫಿಕ್ ಬಗ್ಗೆ ಈಗಾಗ್ಲೇ ಸಾಕಷ್ಟು ಮೀಮ್ ಗಳು, ಜೋಕ್ ಗಳು, ಶಾರ್ಟ್ ಸ್ಟೋರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದವರು ಟ್ರಾಫಿಕ್ ಕ್ಲಿಯರ್ ಆಗುವಷ್ಟರೊಳಗೆ ಒಂದು ಕಾದಂಬರಿಯನ್ನೇ ಬರೆದು ಮುಗಿಸಬಹುದು!.

ಈ ಪಟ್ಟಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದ್ದು ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿ ಪ್ರಯಾಣ ಮುಂದುವರಿಸಲು ಕಾಯುತ್ತಿದ್ದ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲಕರ ಆಸನದಲ್ಲಿಯೇ ಊಟ ಮುಗಿಸಿದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸೆರೆಹಿಡಿದ ವಿಡಿಯೋವನ್ನು ಸಾಯಿಚಂದ್ ಶಬರೀಶ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಮ್​​ನಲ್ಲಿ ಅಪ್‌ಲೋಡ್ ಮಾಡಿದ್ದು, ಮೇ 2 ರಂದು ‘ಬೆಂಗಳೂರಿನ ಪೀಕ್ ಟ್ರಾಫಿಕ್ ಮೊಮೆಂಟ್’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ👇

https://www.instagram.com/reel/Crvlt14AloB/?utm_source=ig_web_copy_link&igshid=MzRlODBiNWFlZA==


See also  ಕಲ್ಲುಗುಂಡಿಯಲ್ಲಿ ಸರಣಿ ಅಪಘಾತ, ಕಾರುಗಳು ನಜ್ಜುಗುಜ್ಜು, ಬೈಕ್ ಸವಾರನಿಗೆ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget