ಕ್ರೈಂ

ಮೀನಿನ ಅಂಗಡಿ ಮಾಲೀಕನಿಗೆ ತಲವಾರು ಝಳಪಿಸಿ ಎಚ್ಚರಿಕೆ

ನ್ಯೂಸ್ ನಾಟೌಟ್: ಬೆಳ್ತಂಗಡಿ ಮೂಲದವರ ಮೀನಿನ ಅಂಗಡಿ ಮಾಲೀಕನಿಗೆ ಬೆಂಗಳೂರಿನಲ್ಲಿ ಕೆಲವು ರೌಡಿಗಳು ತಲವಾರು ಹಿಡಿದು ಹೆದರಿಸಿದ ಘಟನೆ ಭಾನುವಾರ ನಡೆದಿದೆ.

ಡಿ.18 ಬಾಣಸವಾಡಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಜೈ ಭಾರತ್ ನಗರದಲ್ಲಿ ಇರುವ ಸದಾಶಿವರವರ ಅಂಗಡಿಗೆ ನುಗ್ಗಿ  ಹಪ್ತ ನೀಡುವಂತೆ ಬೆದರಿಕೆ ಒಡ್ಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಹಣ ಕೊಡುವುದನ್ನು ನಿರಾಕರಿಸಿದ್ದಾರೆ. ಈ ಸಮಯದಲ್ಲಿ  ಮಾಲೀಕನ ಮೇಲೆಯೇ ಮಾರಕಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಅಷ್ಟಲ್ಲದೆ  ಅಂಗಡಿ ಪಕ್ಕದಲ್ಲಿ ನಿಲ್ಲಿಸಿದ್ದ  ಬೈಕ್ ಗಳನ್ನ ಧ್ವಂಸ ಮಾಡಿದ್ದಾರೆ. ಸದ್ಯ ಜೀವನಹಳ್ಳಿಯ ಪುಡಿ ರೌಡಿಯನ್ನು  ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ಸುಳ್ಯ: ಸ್ಥಳೀಯ ವಾರ ಪತ್ರಿಕೆಯ ವರದಿಗಾರನಿಗೆ ಜೀವ ಬೆದರಿಕೆ ಹಾಕಿದ ಬಿಎಸ್ಎನ್ಎಲ್ ಗುತ್ತಿಗೆ ನೌಕರ..! ಪೊಲೀಸ್ ಠಾಣೆ ಮೆಟ್ಟಿಲೇರಿದ ವರದಿಗಾರ

ಮಂಗಳೂರು: ಸಮುದ್ರದಲ್ಲಿ ಮೀನು ಹಿಡಿಯಲು ಹೋದ ವಿದ್ಯಾರ್ಥಿ ದುರ್ಮರಣ..! ಗಾಳಿ ರಭಸಕ್ಕೆ 15 ರ ಯುವಕ ಬಲಿ

ಗಣಪತಿ ವಿಸರ್ಜನಾ ಮೆರವಣಿಯಲ್ಲಿ 3 ವಿದ್ಯಾರ್ಥಿಗಳಿಗೆ ಚಾಕು ಇರಿತ..! ನಾಗಮಂಗಲ ಕೋಮು ಗಲಭೆ ಬಳಿಕ ಮತ್ತೊಂದು ದುರಂತ..!