ಬೆಂಗಳೂರು

ಬೆಚ್ಚಿ ಬೀಳಿಸುವ ಘಟನೆ,ಕೊಳೆತು ಹೋದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಕಾಲುಗಳು ಪತ್ತೆ..! ತುಂಡು ತುಂಡಾಗಿ ಕತ್ತರಿಸಿ ಎಸೆದಿದ್ದಾರೆಯೇ ಹಂತಕರು?ಕೊಲೆ ಮಾಡಿದ್ಯಾಕೆ?

ನ್ಯೂಸ್‌ ನಾಟೌಟ್‌: ಅಪರಿಚಿತ ಮಹಿಳೆಯ (Murder Case) ಕಾಲುಗಳು ಪತ್ತೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಬಗ್ಗೆ ವರದಿಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಕಾಡಂಚಿನ ಗ್ರಾಮ ಮುನಿಮಾರಾಯ್ಯನದೊಡ್ಡಿ ಸಮೀಪ ಮಹಿಳೆಯನ್ನು ಕೊಲೆ ಮಾಡಿ (Murder Case) ನಂತರ ಅನುಮಾನ ಬಾರದಿರಲಿ ಎಂದು ಹಂತಕರು ದೇಹವನ್ನು ಕತ್ತರಿಸಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಕೊಳೆತ ಸ್ಥಿತಿಯಲ್ಲಿ ಕಾಲುಗಳು ಪತ್ತೆಯಾಗಿದ್ದು, ಇದೇ ಜಾಗದ ಸಮೀಪ ಕಳೆದ ಹದಿನೈದು ದಿನಗಳ ಹಿಂದೆ ಮಹಿಳೆಯ ಕೈ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ. ಇದೀಗ ಕೈ ಸಿಕ್ಕ ಜಾಗದ ಸಮೀಪವೇ ಮಹಿಳೆಯ ಎರಡು ಕಾಲುಗಳು ಸಿಕ್ಕಿದ್ದು, ಆಘಾತಕಾರಿ ವಿಷಯವಾಗಿದೆ.ಮುಂಜಾನೆ ಗ್ರಾಮಸ್ಥರು ಗಮನಿಸಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಂತಕರು ಮಹಿಳೆಯನ್ನು ಕೊಂದು ಅಂಗಾಂಗಳನ್ನು ಕತ್ತರಿಸಿ ಬೇರೆ ಬೇರೆ ಕಡೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು,ಸದ್ಯ ಪೊಲೀಸರು ಮಹಿಳೆಯ ಉಳಿದ ಅಂಗಾಂಗಗಳ ಹುಡುಕಾಟವನ್ನು ನಡೆಸಿದ್ದಾರೆ.

ಸ್ಥಳಕ್ಕೆ ಶ್ವಾನದಳ, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನು ಹಂತಕರ ಬೆನ್ನತ್ತಿರುವ ಬನ್ನೇರುಘಟ್ಟ ಪೊಲೀಸರು ಕೈ ಮತ್ತು ಕಾಲುಗಳ ಜಾಡು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

Related posts

14 ಸೈಟ್ ಗಳನ್ನು ಹಿಂದಿರುಗಿಸಲು ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ..! ಮುಡಾ ಕೇಸ್‌ ನಲ್ಲಿ ಸಿಎಂ ವಿರುದ್ಧ ಎಫ್.ಐ.ಆರ್ ಆದ ಬಳಿಕ ಮಹತ್ವದ ಬದಲಾವಣೆ..!

ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದರೇ ತಂದೆ..! ಚಿಕನ್ ಅಂಗಡಿ ಇಟ್ಟುಕೊಂಡಿದ್ದ ತಂದೆ ರಾತ್ರೋರಾತ್ರಿ ಮಗಳನ್ನೇ ಕತ್ತರಿಸಿದ್ದೇಕೆ? ಮುಂದೇನಾಯ್ತು?

10ನೇ ಕ್ಲಾಸ್ ಪಾಸಾಗಿದ್ದೀರಾ? ರೈಲ್ವೇ ಇಲಾಖೆಯಲ್ಲಿದೆ ಉದ್ಯೋಗ