ಕ್ರೈಂ

ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತರ ಮನೆಯಿಂದಲೇ ಕದ್ದು ಓಡಿದ ಖತರ್ನಾಕ್ ಕಳ್ಳಿ..!

189
Spread the love

ಬೆಂಗಳೂರು: ಪೊಲೀಸ್ ಕಂಡರೆ ಕಳ್ಳರಿಗೆ ಒಂಥರ ಭಯ ಇರುತ್ತದೆ. ಆದರೆ ಇಲ್ಲೊಬ್ಬಳು ಖತರ್ನಾಕ್ ಕಳ್ಳಿ ಪೊಲೀಸ್‌ ಅಧಿಕಾರಿಯ ಮನೆಯಿಂದಲೇ ಕದ್ದು ತನ್ನ ಚಾಲಾಕಿ ತನ ತೋರಿಸಿರುವ ಘಟನೆ ನಡೆದಿದೆ.

ಹೌದು, ಬೆಂಗಳೂರು ನಗರದ ಜಂಟಿ ಟ್ರಾಫಿಕ್ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಮನೆಯಲ್ಲಿ ಕಳ್ಳತನವಾಗಿದೆ. ಅವರ ಸಂಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳು ಕಳವು ಆಗಿವೆ.‌ ಮನೆ ಕೆಲಸದವಳ ಮೇಲೆ ಅನುಮಾನ ಇದ್ದುದರಿಂದ ಪೊಲೀಸರು ತನಿಖೆ ನಡೆಸಿದರು.

ಇದೀಗ ಆರೋಪಿ ಅಂಕಿತಾ ಎಂಬಾಕೆಯನ್ನು ಸಂಜಯ್​ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಂಕಿತಾ ಕಳೆದ ಮೂರು ವರ್ಷದಿಂದ ರವಿಕಾಂತೇಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಕೆಲವು ದಿನಗಳ ಹಿಂದೆ ಮನೆಯ ವಸ್ತುಗಳನ್ನು ಕದ್ದು ತೆಗೆದುಕೊಂಡು ಹೋಗಿದ್ದಳು. ಬೆನ್ನಲ್ಲೇ ಅಂಕಿತಾ ಕೂಡ ನಾಪತ್ತೆಯಾಗಿದ್ದಳು. ಇದೀಗ ಆರೋಪಿ ಅಂಕಿತಾಳನ್ನು ಸಂಜಯ್​ ನಗರ ಪೊಲೀಸರು ಹಾವೇರಿಯಲ್ಲಿ ಬಂಧಿಸಿದ್ದಾರೆ. ಆದರೆ ಆಕೆ ಕದ್ದಿರುವುದನ್ನು ನಿರಾಕರಿಸಿದ್ದರಿಂದ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಲಾಗಿದೆ.

See also  ಬಂಟ್ವಾಳ ಬಿಜೆಪಿ ಶಾಸಕರಿಗೆ ಕಾರು ಡಿಕ್ಕಿ..! ರಾಜೇಶ್ ನಾಯ್ಕ್ ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget