ನ್ಯೂಸ್ ನಾಟೌಟ್ : ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇ ಬೇಕು. ಹೀಗಾಗಿ ಯಾರೇ ಆಗ್ಲಿ, ಎಲ್ಲೇ ಅವಿತುಕೊಂಡಿರಲಿ ತಪ್ಪು ಮಾಡಿದ್ರೆ ಆತನನ್ನು ಶಿಕ್ಷೆಗೆ ಗುರಿ ಪಡಿಸೋದು ಕರ್ತವ್ಯ. ಇದೀಗ ಬರೋಬ್ಬರಿ ೩೮ ವರ್ಷಗಳ ಬಳಿಕ ಬೈಸಿಕಲ್ ಕದ್ದಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪಾಷಾ ಜಾನ್ ಎಂಬ ವ್ಯಕ್ತಿ 1985 ರಲ್ಲಿ ಬಳಿಕ ಮೂವರ ತಂಡವನ್ನು ರಚಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ಶುರು ಮಾಡಲಾಯಿತು. ಜಾನ್ ಇರುವ ಬಗ್ಗೆ ಮಾಹಿತಿ ತಿಳಿಯಲು ಪೊಲೀಸರು ಅವರ ಸಂಬಂಧಿಕರನ್ನು ಪತ್ತೆ ಮಾಡಿ ಹಿಂಬಾಲಿಸಿದರು. ಬಳಿಕ ಸಂಬಂಧಿಕರೊಬ್ಬರು ಜಾನ್ ಕೆಆರ್ ಪುರಂನಲ್ಲಿ ನೆಲೆಸಿರುವುದಾಗಿ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರ ತಂಡ ಜಾನ್ ಪತ್ತೆ ಮಾಡಿದೆ.
ಪೊಲೀಸರು ಜಾನ್ ಮನೆಗೆ ತೆರಳಿ ಜಾನ್ನನ್ನು ಹಿಡಿದಿದ್ದಾರೆ. ಈ ವೇಳೆ ಗಾಬರಿಗೊಂಡ ಜಾನ್, ನೀವು ತಪ್ಪು ವ್ಯಕ್ತಿಯನ್ನು ಬಂಧಿಸಿದ್ದೀರಿ. ನಾನೇನು ಮಾಡಿಲ್ಲ ಎಂದು ವಾದ ಮಾಡಿದ್ದಾರೆ. ಈ ವೇಳೆ ಪೊಲೀಸರ ತಂಡವು ಜಾನ್ ಅವರ ಬೆರಳಚ್ಚುಗಳನ್ನು ಸಂಗ್ರಹಿಸಿ ಆರೋಪಿ ಎಂದು ಸಾಭೀತಾಗಿದ್ದು ಜಾನ್ರನ್ನು ಬಂಧಿಸಿದ್ದಾರೆ. 1985 ರಲ್ಲಿ ಬೈಸಿಕಲ್ ಕಳ್ಳತನ ಮಾಡಿದ್ದ ಜಾನ್ ಅವರನ್ನು ಈಗ ಪೊಲೀಸರು ಬಂಧಿಸಿದ್ದಾರೆ. ವಯಸ್ಸಿನವನಾಗಿದ್ದಾಗ ಸೈಕಲ್ ಕದ್ದಿದ್ದರು.ಕಳ್ಳತನ ಮಾಡಿದ ಒಂದೇ ತಿಂಗಳಿಗೆ ಅವರನ್ನು ಕೆಜಿಎಫ್ ನಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ ಈಗ ಅವರನ್ನು ಮತ್ತೆ ಬೆಂಗಳೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಈಗ ಪಾಷಾ ಜಾನ್ ಅವರಿಗೆ 60 ವರ್ಷ ತುಂಬಿದೆ. ಆದರೂ ಯಾಕೆ ಅವರನ್ನು ಬಂಧಿಸಲಾಗಿದೆ ಎಂಬ ಪ್ರಶ್ನೆಗಳು ಕಾಡೋದು ಸಹಜ. ಪಾಷಾ ಜಾನ್ ತಮ್ಮ ಜೀವನಕ್ಕಾಗಿ ಆಟೋರಿಕ್ಷಾ ಓಡಿಸುತ್ತಾರೆ. 1985 ರಿಂದ ಪಾಷಾ ಜಾನ್ ಅವರ ಹೆಸರಿನಲ್ಲಿ ಸುಮಾರು 200 ವಾರಂಟ್‌ಗಳನ್ನು ಹೊರಡಿಸಿರಬಹುದು ಎಂದು ನಗರ ವಕೀಲರೊಬ್ಬರು ತಿಳಿಸಿದ್ದಾರೆ. ಜಾನ್ ಅವರು ಕೆಲವು ವರ್ಷಗಳ ಹಿಂದೆ ಕೆಜಿಎಫ್‌ನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಈ ಹಿನ್ನೆಲೆ ಅವರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
ಇನ್ನು ಜುಲೈ ತಿಂಗಳಲ್ಲಿ ಬೆಂಗಳೂರಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಎಲ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ಕ್ಲಿಯರ್ ಮಾಡುವಂತೆ ಹಿರಿಯ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆ ಧೂಳು ತುಂಬಿದ್ದ ಹಳೆಯ ಫೈಲ್ಗಳನ್ನು ನೋಡಲಾರಂಭಿಸಿದೆ. ಆಗ ಅತ್ಯಂತ ಹಳೆಯ ಪ್ರಕರಣ ಕೈ ಸೇರಿತು. ಆರೋಪಿ ನಾಪತ್ತೆ ಹಿನ್ನೆಲೆ ಪ್ರಕರಣ ವಿಚಾರಣೆ ಹಂತದಲ್ಲಿಯೇ ಉಳಿದಿತ್ತು. ಆಗ ನಾನು ನನ್ನ ತಂಡಕ್ಕೆ ಆರೋಪಿಯನ್ನು ಪತ್ತೆ ಹಚ್ಚುವಂತೆ ಸೂಚಿಸಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ಮೂವರ ತಂಡವನ್ನು ರಚಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ತೀವ್ರಗೊಂಡಿತು.ಜಾನ್ ಇರುವ ಬಗ್ಗೆ ಮಾಹಿತಿ ತಿಳಿಯಲು ಪೊಲೀಸರು ಅವರ ಸಂಬಂಧಿಕರನ್ನು ಪತ್ತೆ ಮಾಡಿ ಹಿಂಬಾಲಿಸಿದರು. ಬಳಿಕ ಸಂಬಂಧಿಕರೊಬ್ಬರು ಜಾನ್ ಕೆಆರ್ ಪುರಂನಲ್ಲಿ ನೆಲೆಸಿರುವುದಾಗಿ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಜಾನ್ ಅವರನ್ನು ಪತ್ತೆ ಮಾಡಿದೆ.
ಪೊಲೀಸರು ಜಾನ್ ಮನೆಗೆ ತೆರಳಿ ಜಾನ್ನನ್ನು ಹಿಡಿದಿದ್ದಾರೆ. ಈ ವೇಳೆ ಗಾಬರಿಗೊಂಡ ಜಾನ್, ನೀವು ಬೇರೆ ಯಾರನ್ನೋ ಹುಡುಕುತ್ತಿದ್ದೀರಿ.. ನಾನೇನು ಮಾಡಿಲ್ಲ ಎಂದು ವಾದ ಮಾಡಿದ್ದಾರೆ. ಈ ವೇಳೆ ಪೊಲೀಸರ ತಂಡವು ಜಾನ್ ಅವರ ಬೆರಳಚ್ಚುಗಳನ್ನು ಸಂಗ್ರಹಿಸಿ ಆರೋಪಿ ಎಂದು ಸಾಬಿತಾಗಿದ್ದು ಜಾನ್ರನ್ನು ಬಂಧಿಸಿದ್ದಾರೆ. 1985 ರಲ್ಲಿ ಬೈಸಿಕಲ್ ಕಳ್ಳತನ ಮಾಡಿದ್ದ ಜಾನ್ ಅವರನ್ನು ಈಗ ಪೊಲೀಸರು ಬಂಧಿಸಿದ್ದಾರೆ.