ಬೆಂಗಳೂರುವೈರಲ್ ನ್ಯೂಸ್

ಐತಿಹಾಸಿಕ ಬೆಂಗಳೂರು ಕರಗಕ್ಕೆ ನಾಳೆ(ಎ.15) ಚಾಲನೆ, ಇಲ್ಲಿದೆ ಕಾರ್ಯಕ್ರಮಗಳ ವಿವರ

167

ನ್ಯೂಸ್ ನಾಟೌಟ್:  ಐತಿಹಾಸಿಕ ಬೆಂಗಳೂರು ಕರಗ (Bengaluru Karaga) ಉತ್ಸವಕ್ಕೆ ನಾಳೆ(ಏ.15) ರಂದು ಚಾಲನೆ ದೊರೆಯಲಿದೆ.ಏ.15ರಿಂದ 23ರ ವರೆಗೆ ಕರಗ ಮಹೋತ್ಸವ ನಡೆಯಲಿದೆ. ಏ.23ರ ಚೈತ್ರ ಪೌರ್ಣಮಿಯಂದು ಕರಗ ಮಹೋತ್ಸವ ಕೊನೆಗೊಳ್ಳಲಿದೆ.

ಪ್ರತಿ ವರ್ಷದಂತೆ ಈ ಬಾರಿಯ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲು ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.ಈ ಬಾರಿಯೂ ಕರಗವನ್ನು ಕರಗದ ಪೂಜಾರಿ ಎ.ಜ್ಞಾನೇಂದ್ರ ದೇವರನ್ನು ಹೊತ್ತು ಸಾಗಲಿದ್ದಾರೆ. ಅವರನ್ನು ಮುಜರಾಯಿ ಇಲಾಖೆ ಮತ್ತು ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಆಯ್ಕೆ ಮಾಡಿದೆ ಎನ್ನಲಾಗಿದೆ.

ಈ ಬಾರಿ ಜ್ಞಾನೇಂದ್ರ ಹದಿಮೂರನೇ ಸಲ ಕರಗ ಹೊರುತ್ತಿರುವುದಾಗಿದೆ.ಕರಗ ಕಾರ್ಯಕ್ರಮದ ವೇಳಾಪಟ್ಟಿ ಹೀಗಿದ್ದು, ಏ.15ರ ರಾತ್ರಿ 10ಕ್ಕೆ ರಥೋತ್ಸವ ಧ್ವಜಾರೋಹಣ, ಏ.16ರಿಂದ 19 ಪ್ರತಿ ದಿನ ವಿಶೇಷ ಪೂಜೆ ಮತ್ತು ಮಂಗಳಾರತಿ, ಏ.21ಕ್ಕೆ ಹಸಿ ಕರಗ ಆಯೋಜನೆ, ಏ.23 ರಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯ ರಥೋತ್ಸವ, ಏ.24 ರಂದು ದೇವಸ್ಥಾನದಲ್ಲಿ ಗಾವು ಪೂಜೆ, ಏ.25 ಕ್ಕೆ ಕೊನೆಯ ದಿನದ ವಸಂತೋತ್ಸವ ಧ್ವಜಾರೋಹಣ ನೆರವೇರಲಿದೆ ಎಂದು ವರದಿ ತಿಳಿಸಿದೆ.

See also  ಉಡುಪಿ: ಕುಡಿದ ಮತ್ತಿನಲ್ಲಿ ತ‌ನ್ನದೇ ಮನೆಗೆ ಬೆಂಕಿ‌ ಹಚ್ಚಿದ ವ್ಯಕ್ತಿ..! ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget