Latestಕ್ರೈಂಬೆಂಗಳೂರುವೈರಲ್ ನ್ಯೂಸ್

ಬೆಂಗಳೂರಿನಲ್ಲಿ ಸೂಟ್‌ ಕೇಸ್‌ ನೊಳಗೆ ಬಾಲಕಿಯ ಶವ ಇಟ್ಟು ಎಸೆದಿದ್ದ ಆರೋಪಿಗಳು ಪತ್ತೆ..! ಬಿಹಾರದಲ್ಲಿ 7 ಮಂದಿಯ ಬಂಧನ..!

816

ನ್ಯೂಸ್ ನಾಟೌಟ್: ಬೆಂಗಳೂರಿನ ಚಂದಾಪುರ ರೈಲ್ವೆ ಬ್ರಿಡ್ಜ್‌ ಬಳಿ ಬಾಲಕಿಯೊಬ್ಬಳನ್ನು ಹತ್ಯೆಗೈದು, ಸೂಟ್‌ ಕೇಸ್‌ ನಲ್ಲಿ ಶವ ತುಂಬಿ ಎಸೆದಿದ್ದ 7 ಜನ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.

ಬಂಧಿತ ಎಲ್ಲಾ ಆರೋಪಿಗಳು ಬಿಹಾರದ ನವಾಡ ಜಿಲ್ಲೆಯವರಾಗಿದ್ದಾರೆ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ವಿಭಾಗದ ಸೂರ್ಯನಗರ ಪೊಲೀಸರು ಬಿಹಾರದಿಂದ ಕರ್ನಾಟಕಕ್ಕೆ ಕರೆತರುತ್ತಿದ್ದಾರೆ. 7 ರಲ್ಲಿ ಮೂವರ ವಿವರ ಲಭ್ಯವಾಗಿದ್ದು, ಅವರನ್ನು ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್ ಎಂದು ಗುರುತಿಸಲಾಗಿದೆ. ಆಶಿಕ್ ಕುಮಾರ್ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ಸೂಟ್‌ ಕೇಸ್‌ನಲ್ಲಿ ಶವ ಮಾತ್ರ ಇತ್ತು. ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 21 ರಂದು ಚಂದಾಪುರ ರೈಲ್ವೆ ಬ್ರಿಡ್ಜ್‌ ಬಳಿ ಸೂಟ್‌ ಕೇಸ್‌ ನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಹತ್ಯೆಯಾದ ಬಾಲಕಿಯನ್ನು ರೀಮಾ(17) ಎಂದು ಗುರುತಿಸಲಾಗಿತ್ತು. ಪ್ರಾಥಾಮಿಕ ತನಿಖೆಯಲ್ಲಿ, ಬೇರೆಡೆ ಕೊಲೆ ಮಾಡಿ, ಶವ ಅಲ್ಲಿ ಎಸೆಯಲಾಗಿದೆ ಎಂದು ತಿಳಿದು ಬಂದಿತ್ತು.

ICU ನಲ್ಲಿ ಮಹಿಳಾ ರೋಗಿಯ ಮೇಲೆ ಸಿಬ್ಬಂದಿಯಿಂಲೇ ಅತ್ಯಾಚಾರ..! ದೂರು ದಾಖಲಿಸಿದ ಪತಿ..!

ಜೂ.8ರಿಂದ ರಾಜ್ಯದಲ್ಲಿ ಮತ್ತೆ ಮಳೆ..! 11 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ..!

See also  ಆಟವಾಡುತ್ತಲೇ ಅಪ್ಪ-ಮಗನಿಗೆ ಕಚ್ಚಿದ ಮುದ್ದಿನಿಂದ ಸಾಕಿದ ಬೆಕ್ಕು..!,ಒಂದು ವಾರ ಕಳೆಯುವಷ್ಟರಲ್ಲಿ ತಂದೆ-ಮಗ ದಾರುಣ ಅಂತ್ಯ..!ಏನಿದು ಆಘಾತಕಾರಿ ಘಟನೆ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget