Latestಕ್ರೀಡೆಕ್ರೀಡೆ/ಸಿನಿಮಾ

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್ ​ಸಿಬಿಯ ಮುಂದಿನ ಪಂದ್ಯ​ ಬೇರೆಡೆಗೆ ಶಿಫ್ಟ್​..! ಇಲ್ಲಿದೆ ಸಂಪೂರ್ಣ ಮಾಹಿತಿ

642

ನ್ಯೂಸ್ ನಾಟೌಟ್: ಐಪಿಎಲ್​-2025ರ ಟೂರ್ನಿ ಕ್ಲೈಮ್ಯಾಕ್ಸ್​ ಹಂತ ತಲುಪಿದ್ದು, ಮೇ 29ರಿಂದ ಪ್ಲೇ ಆಫ್​ ಪಂದ್ಯಗಳು ನಡೆಯಲಿವೆ. ಅದರಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್ ರೈಸರ್ಸ್​ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯ ಬೇರೆಡೆಗೆ ಶಿಫ್ಟ್​ ಆಗಿದೆ.

ಇದೇ ಮೇ 23 ರಂದು ನಿಗದಿಯಂತೆ ಆರ್ ​ಸಿಬಿ ಮತ್ತು ಎಸ್ ​ಆರ್ ​ಎಚ್​(SRH) ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ ಬೆಂಗಳೂರಿನಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಲಕ್ನೋಗೆ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಮೇ 23ರಂದೇ ಆರ್​ಸಿಬಿ ವರ್ಸಸ್ ಹೈದರಾಬಾದ್​ ನಡುವಿನ ಪಂದ್ಯ ಲಕ್ನೋನ ಏಕನಾಥ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಲಕ್ನೋದ ಎಕನಾ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮೇ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತ ವಿರುದ್ಧ ಪಂದ್ಯವಿತ್ತು. ಆದರೆ ಮಳೆಯಿಂದಾಗಿ ನಡೆಸಲು ಸಾಧ್ಯವಾಗಲಿಲ್ಲ. ಪಂದ್ಯ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ಎರಡೂ ತಂಡಕ್ಕೆ ತಲಾ ಒಂದೊಂದು ಅಂಕ ನೀಡಲಾಯ್ತು, ಇದರಿಂದ ಆರ್ ​ಸಿಬಿ ಪ್ಲೇ ಆಫ್ ​ಗೆ ಪ್ರವೇಶಿಸಿದರೆ, ಕೆಕೆಆರ್​ ಪ್ಲೇ ಆಫ್ ​ನಿಂದ ಹೊರಬಿದ್ದಿದೆ.

ಈ ರೀತಿ ಮತ್ತೆ ಆಗಬಾರದು ಎನ್ನುವ ಕಾರಣಕ್ಕೆ ಆರ್​ಸಿಬಿ ಮತ್ತು ಎಸ್​ಆರ್​ಎಚ್​ ಪಂದ್ಯವನ್ನು ಬೆಂಗಳೂರಿನ ಲಕ್ನೋಗೆ ಶಿಫ್ಟ್ ಮಾಡಲಾಗಿದೆ.

ಜೈಲಿನಲ್ಲಿ ಮಾದಕ ವಸ್ತು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಬೆಕ್ಕು ಪೊಲೀಸ್ ವಶಕ್ಕೆ..! ಏನಿದು ವಿಚಿತ್ರ ಪ್ರಕರಣ..?

ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರು ಸೇರಿ ಮೂವರಿಂದ ಅತ್ಯಾಚಾರ..! ಪೊಲೀಸ್ ಅಧಿಕಾರಿಯ ಪುತ್ರ ಪರಾರಿ..!

See also  ಪುಟ್ಟ ಮಗುವಿನ ಅಪರೂಪದ ಕಾಯಿಲೆಯ ಚಿಕಿತ್ಸೆಗೆ ಸಹಕರಿಸುವಂತೆ ಮನವಿ ಮಾಡಿದ ಕಿಚ್ಚ ಸುದೀಪ್‌..! ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿ ವೆಚ್ಚ..!
  Ad Widget   Ad Widget     Ad Widget   Ad Widget   Ad Widget   Ad Widget