ಉಡುಪಿಕರಾವಳಿಬೆಂಗಳೂರುಮಂಗಳೂರು

ಮುಂದಿನ ತೀರ್ಪು ಬರುವವರೆಗೂ ಬೆಂಗಳೂರಿನಲ್ಲಿ ಕಂಬಳ ನಡೆಸದಂತೆ ಹೈಕೋರ್ಟ್ ಸೂಚನೆ..! ವಾಣಿಜ್ಯ ಉದ್ದೇಶಕ್ಕಾಗಿ ಬೆಂಗಳೂರಿನಲ್ಲಿ ಕಂಬಳ ನಡೆಸುತ್ತಿದ್ದಾರೆ ಎಂದ ಪೇಟಾ ಪರ ವಕೀಲ..!

ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ನಡೆಯುವ ಕಂಬಳ ಉತ್ಸವದ ವಿರುದ್ಧ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 26ಕ್ಕೆ ನಿಗದಿಪಡಿಸಿದೆ.

ಈ ವಿಚಾರದಲ್ಲಿ ಅಡ್ವೊಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಅರ್ಜಿದಾರರ ಸಂಘಟನೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಕರಾವಳಿ ಪ್ರದೇಶದ ಸಾಂಪ್ರದಾಯಿಕ ಕ್ರೀಡೆ ಬೆಂಗಳೂರಿನಲ್ಲಿ ನಡೆಸಬಾರದು. ಬೆಂಗಳೂರಿಗೆ ಸುಮಾರು 200 ಕೋಣಗಳನ್ನು 300 ಕಿ.ಮೀ.ಗೂ ಹೆಚ್ಚು ಸಾಗಿಸುತ್ತಿರುವುದು ನೋವಿನ ಸಂಗತಿ ಎಂದರು.

ಕಂಬಳವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದು ಸ್ವತಃ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಈ ಹಿಂದೆಯೇ ಮಾಹಿತಿ ನೀಡಿತ್ತು, ಏಕೆಂದರೆ ಇದು ಅಲ್ಲಿನ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಆದರೆ ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ಆ ಎರಡು ಜಿಲ್ಲೆಗಳ ಆಚೆಗೆ ನಡೆಸಲಾಗುತ್ತಿದೆ. ಈ ಕಾರಣಕ್ಕೆ ಮತ್ತು ಪ್ರಾಣಿ ಹಿಂಸೆಯನ್ನು ತಡೆಯಲು ಕಂಬಳಕ್ಕೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಗೆ ಪೇಟಾ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ ಮುಂದಿನ ತೀರ್ಪು ಬರುವವರೆಗೂ ಬೆಂಗಳೂರಿನಲ್ಲಿ ಕಂಬಳ ನಡೆಸದಂತೆ ಕೋರ್ಟ್ ಸೂಚನೆ ನೀಡಿದೆ.

Click

https://newsnotout.com/2024/10/vishwa-hindu-parishad-and-arun-kumar-puttila-lkannada-news-d/
https://newsnotout.com/2024/10/union-bank-of-india-kannada-news-1500-jobs-are-there-d/
https://newsnotout.com/2024/10/kannada-news-railway-rajasthani-jaipura-october/
https://newsnotout.com/2024/10/bsnl-new-logo-kannada-news-introduced-network-kannada-news/
https://newsnotout.com/2024/10/mangaluru-parangipete-kannada-news-attack-viral-news/
https://newsnotout.com/2024/10/mangaluru-kannada-news-surathkal-kannada-news/
https://newsnotout.com/2024/10/mangaluru-kannada-news-helmet-kannada-news-mangaluru/

Related posts

ಸುಳ್ಯ : ಶಾಸಕಿ ಭಾಗೀರಥಿ ಮುರುಳ್ಯ ಅವರಿಂದ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ

ಸುಬ್ರಹ್ಮಣ್ಯ:ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು,ಎರಡು ಕಾರು ಜಖಂ

ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಪತಿ, ಆರೋಪಿ ಪತಿಯನ್ನು ಬಂಧಿಸಿದ ಪೊಲೀಸರು