ನ್ಯೂಸ್ ನಾಟೌಟ್: ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಜೀವ ಕಳೆದುಕೊಂಡ ಚಿನ್ಮಯಿ ಶೆಟ್ಟಿ (19) ಕುಟುಂಬಕ್ಕೆ ಸರ್ಕಾರ ಪರಿಹಾರದ ಚೆಕ್ ಹಸ್ತಾಂತರ ಮಾಡಿದೆ. ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕುಚ್ಚೂರು ರಸ್ತೆಯಲ್ಲಿರುವ ನಿವಾಸಕ್ಕೆ ತೆರಳಿ ಪರಿಹಾರ ನೀಡಿದ್ದಾರೆ.
ಬೆಂಗಳೂರಿನ ತಿಪ್ಪಸಂದ್ರದಲ್ಲಿ ಚಿನ್ಮಯಿ ಕುಟುಂಬ ನೆಲೆಸಿತ್ತು. ಚಿನ್ಮಯಿ ನಿಧನರಾದ ಮೇಲೆ ತಾಯಿ ಪೂಜಾ ಶೆಟ್ಟಿ ಹಾಗೂ ಕರುಣಾಕರ ಶೆಟ್ಟಿ ಉಡುಪಿಯ ಹಿರಿಯರ ಮನೆಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಎಸ್ಪಿ ಹರಿರಾಮ್ ಶಂಕರ್, ಎಸಿ ರಶ್ಮಿ ಮೂಲಕ 25 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರ ಮಾಡಲಾಗಿದೆ.
ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿರುವ ಡಾ.ವಿದ್ಯಾ ಕುಮಾರಿ, ಸರ್ಕಾರದ ಆದೇಶದಂತೆ 25 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಸರ್ಕಾರ ಈ ಕುಟುಂಬದ ಜೊತೆ ಇರಲಿದೆ. ಮುಂದೆಯೂ ಜಿಲ್ಲಾಡಳಿತ ಅಗತ್ಯ ನೆರವು ನೀಡಲು ಬದ್ಧವಾಗಿದೆ. ಕುಟುಂಬಕ್ಕೆ ಈ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಹೇಳಿದರು.
ವಿಕೃತವಾಗಿ ಸೂಟ್ ಕೇಸ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ..! ಕಾಲು, ಕೈ, ತಲೆಯನ್ನು ಬೇರೆ ಬೇರೆಯೆ ಇರಿಸಲಾಗಿತ್ತು..!