ಬೆಂಗಳೂರುರಾಜ್ಯವೈರಲ್ ನ್ಯೂಸ್

ಐತಿಹಾಸಿಕ ಬೆಂಗಳೂರು ಕರಗಕ್ಕೆ ದಿನಾಂಕ ನಿಗದಿ, ಒಟ್ಟು 11 ದಿನಗಳ ಕಾಲ ನಡೆಯಲಿದೆ ಮಹೋತ್ಸವ

ನ್ಯೂಸ್ ನಾಟೌಟ್: ವಿಶ್ವ ವಿಖ್ಯಾತ, ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ನಿಗದಿ ಆಗಿದ್ದು, ಏ.4ರಿಂದ 14ರವರೆಗೆ ಬೆಂಗಳೂರು ಕರಗ ಉತ್ಸವ ನಡೆಯಲಿದೆ ಎಂದು ತಿಳಿದುಬಂದಿದೆ.

ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಮಹೋತ್ಸವ ನಡೆಯಲಿದ್ದು, ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ ಎನ್ನಲಾಗಿದೆ. ಜ್ಞಾನೇಂದ್ರ 15ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ.
ನಿನ್ನೆ ಅಂದರೆ ಫೆ.27ರಂದು ನಡೆದ ಸಭೆಯಲ್ಲಿ ಧರ್ಮರಾಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ಎ.ಜ್ಞಾನೇಂದ್ರ ಸ್ವಾಮಿ ಅವರನ್ನು ಕರಗ ಹೊರಲು ಆಯ್ಕೆ ಮಾಡಿದೆ.

ಏಪ್ರಿಲ್ 4 ರಿಂದ ಉತ್ಸವ ಆರಂಭವಾಗಿ ಏಪ್ರಿಲ್ 14 ರವರೆಗೆ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಧರ್ಮರಾಯಸ್ವಾಮಿ ಕರಗ ವಿಜೃಂಭಣೆಯಿಂದ ನಡೆಯಲಿದೆ. ಒಟ್ಟಾರೆ ಏ.4 ರಂದು ಧ್ವಜಾರೋಹಣ, ಪೂಜಾ ವಿಧಿವಿಧಾನದ ಮೂಲಕ ಆರಂಭವಾಗುವ ಕರಗ ಏ.14ರವರೆಗೆ ಜರುಗಲಿದೆ.

Click

Related posts

ಪೇಟೆಗೆ ಬಂದು ಕಳ್ಳತನ, ಕಾಡಿನ ಬಂಡೆ ಮತ್ತು ಮರಗಳ ಮೇಲೆ ವಾಸ..! ವಿಚಿತ್ರ ಕಳ್ಳನನ್ನು ಸೆರೆಹಿಡಿದ ಪೊಲೀಸರು..!

ಅಮ್ಮ ಬೈಕ್‌ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ 20ರ ಯುವಕ..! ಬಡತನದ ಮಧ್ಯೆಯೂ 50ಸಾವಿರ ಸಾಲ ಮಾಡಿ ಹಣ ಹೊಂದಿಸಿದ್ದ ತಾಯಿ ಈಗ ಅನಾಥೆ..!

ಭಾರತದಿಂದ ಕತ್ತೆಗಳು ನಾಪತ್ತೆ ಆಗುವುದಕ್ಕೆ ಚೀನಾ ದೇಶವೇ ಕಾರಣ ಎಂಬ ರಹಸ್ಯ ಬಯಲು..! ನೇಪಾಳದ ಮೂಲಕ ಕಳ್ಳಸಾಗಾಣೆ..!