ಕ್ರೈಂಬೆಂಗಳೂರುವೈರಲ್ ನ್ಯೂಸ್

ಹೊಸ ಐಷಾರಾಮಿ ಕಾರ್ ನೊಳಗಿತ್ತು 4 ಕೋಟಿ ರೂ. ಹಣದ ಚೀಲ, ಡೆಬಿಟ್ ಕಾರ್ಡ್ ಗಳು..! ಅಪರಿಚಿತರಿಂದ ಬಂದ ಫೋನ್‌ ಕರೆ ಅಧಿಕಾರಿಗಳಿಗೆ ನೀಡಿದ ಸುಳಿವೇನು..?

37
Spread the love

ನ್ಯೂಸ್ ನಾಟೌಟ್: ಲೋಕಸಭೆ ಚುನಾವಣಾ ಸಮಯದಲ್ಲಿ ದಾಖಲೆಯಿಲ್ಲದೇ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಹಣವನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ. ಶನಿವಾರ(ಎ.14) ಜಯನಗರ ಠಾಣಾ ವ್ಯಾಪ್ತಿಯಲ್ಲಿ ಕೋಟಿ ಕೋಟಿ ಹಣದ ಬ್ಯಾಗ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಕಾರಿನಲ್ಲಿ‌ ಒಂದಷ್ಟು ದಾಖಲೆಗಳು, ಹಾರ್ಡ್ ಡಿಸ್ಕ್, ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿವೆ.

ಹೀಗಾಗಿ ಕಾರಿನಲ್ಲಿ ಪತ್ತೆಯಾಗಿರುವ ದಾಖಲೆಗಳ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಇನ್ನೊಂದು ಕಡೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಏ.13ರಂದು ಬೆಂಗಳೂರಿನ ಜಯನಗರದ ಕಾರೊಂದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಾಂತರ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಅಪರಿಚಿತರಿಂದ ಬಂದ ಫೋನ್‌ ಕರೆ ಮೇರೆಗೆ ಅಧಿಕಾರಿಗಳು ಫೀಲ್ಡಿಗಿಳಿದಿದ್ದರು. ಜಯನಗರದಲ್ಲಿ ಬೆಂಜ್‌ ಕಾರಿನಲ್ಲಿ ಕೋಟಿ ಕೋಟಿ ಹಣವನ್ನು ಸಾಗಿಸಲಾಗುತ್ತಿದೆ ಎಂಬ ವಿಷಯ ತಿಳಿದಿತ್ತು.

ಕಿಡಿಗೇಡಿಗಳು ಎರಡು ಕಾರು ಹಾಗೂ ಸ್ಕೂಟಿಯಲ್ಲಿ ಬಂದಿದ್ದರು. ಸ್ಕೂಟಿಯಲ್ಲಿದ್ದ ಕೋಟಿ ಕೋಟಿ ಹಣವನ್ನು ಕಾರಿಗೆ ಶಿಫ್ಟ್‌ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದರು. ಕೂಡಲೇ ಎರಡು ಕಾರುಗಳನ್ನು ನಿಲ್ಲಿಸಿ ಪರಿಶೀಲನೆ ಮಾಡುವಾಗ ಮೊದಮೊದಲು ತಪಾಸಣೆಗೆ ಅಡ್ಡಿಪಡಿಸಿದ್ದಾರೆ. ಅನುಮಾನಬಾರದಿರಲಿ ಎಂದು ಸುಮಾರು 4 ಕೋಟಿ ರೂ. ಹಣವನ್ನು ಚೀಲವೊಂದರಲ್ಲಿ ತುಂಬಿಸಿದ್ದರು. ಅಧಿಕಾರಿಗಳು ತಪಾಸಣೆಗೆ ಮುಂದಾದ ಮಾವಿನ ಹಣ್ಣಿನ ಬ್ಯಾಗ್‌ ಅದು ಬಿಡ್ರೀ ಎಂದು ದಬಾಯಿಸಿ, ಕಾರು ಲಾಕ್‌ ಮಾಡಿದ್ದಾರೆ. ಆದರೆ ಇವರ ನಡೆಯಿಂದ ಮತ್ತಷ್ಟು ಅನುಮಾನಗೊಂಡ ಚುನಾಣಾಧಿಕಾರಿಗಳು ಕಾರಿನ ಗ್ಲಾಸ್‌ ಒಡೆದು ಪರಿಶೀಲನೆ ನಡೆಸಿದಾಗ ಗರಿ ಗರಿ ಹಣದ ಕಂತೆ ಪತ್ತೆಯಾಗಿತ್ತು. ಕಂತೆ ಕಂತೆ ಹಣ ಸಿಗುತ್ತಿದ್ದಂತೆ ಕಾರಿನಲ್ಲಿದ್ದ ಐವರು ಕಾಲ್ಕಿತ್ತಿದ್ದರು.

ಇನ್ನೂ ಅಕ್ರಮವಾಗಿ ಹಣ ಸಾಗಾಟ ಮಾಡಲು ಹೊಸ ಕಾರು ಖರೀಸಿದ್ರಾ ಎಂಬ ಅನುಮಾನ ಮೂಡಿದೆ. ಬೆಂಚ್‌ ಕಾರನ್ನು ನಿನ್ನೆ ಶುಕ್ರವಾರವಷ್ಟೇ ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದು ಫಾರ್ಚೂನರ್‌ ಕಾರು ತಡೆದು ಪರಿಶೀಲನೆ ನಡೆಸುತ್ತಿದ್ದಂತೆ ಐವರು ಪರಾರಿ ಆಗಿದ್ದಾರೆ.

See also  ಬಿಡುಗಡೆಯಾಗಲಿದೆ ಮತ್ತೋರ್ವ ಶಾಸಕನ ಸೆಕ್ಸ್ ಸಿಡಿ? ಏನಿದು ವೈರಲ್ ವಿಚಾರ?
  Ad Widget   Ad Widget   Ad Widget