Latestದೇಶ-ವಿದೇಶಬೆಂಗಳೂರುರಾಜಕೀಯರಾಜ್ಯ

ಬೆಂಗಳೂರಿಗೆ ನಾಲ್ಕೂವರೆ ಸಾವಿರ ಎಲೆಕ್ಟ್ರಿಕ್ ಬಸ್​ ನೀಡುತ್ತೇನೆ ಎಂದ ಹೆಚ್.​ಡಿ ಕುಮಾರಸ್ವಾಮಿ..! ಪ್ರತಿ ಪಂಚಾಯಿತಿ ಮಟ್ಟದಲ್ಲಿ ಉಚಿತ ಇಂಗ್ಲಿಷ್ ಶಾಲೆ..?

1.6k

ನ್ಯೂಸ್ ನಾಟೌಟ್: ಈ ವರ್ಷ ದೇಶಾದ್ಯಂತ 14 ಸಾವಿರ ಎಲೆಕ್ಟ್ರಿಕ್ ಬಸ್ ಕೊಡಲು ತೀರ್ಮಾನ ಮಾಡಿದ್ದೇನೆ. ಇದರಲ್ಲಿ ಬೆಂಗಳೂರಿಗೆ ನಾಲ್ಕೂವರೆ ಸಾವಿರ ಎಲೆಕ್ಟ್ರಿಕ್ ಬಸ್ ​ಗಳನ್ನು ನೀಡುತ್ತೇನೆ. ಬೇರೆ ರಾಜ್ಯಕ್ಕೆ ಎರಡು ಸಾವಿರ ಬಸ್ ​ಗಳನ್ನು ನೀಡುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumarswamy) ಘೋಷಿಸಿದ್ದಾರೆ.

ಮಂಡ್ಯದಲ್ಲಿ ಮೈಶುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬೃಹತ್ ಕೈಗಾರಿಕಾ ಸಚಿವನಾಗಿ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ಮಂಡ್ಯ ಜಿಲ್ಲೆಗೆ ಕೈಗಾರಿಕೆ ತರಲು ನಿತ್ಯ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರದ ಸಹಕಾರ ಪಡೆಯುವ ಪ್ರಯತ್ನವನ್ನೂ ಮಾಡುತ್ತೇನೆ. ರೈತ ಭವನ ಪುನಶ್ಚೇತನಕ್ಕೆ ನಾಲ್ಕು ಕೋಟಿ ಅನುದಾನ ಕೊಡಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಹೊಸ ಕಾರ್ಖಾನೆಗೆ 100 ಕೋಟಿ ರೂ. ಮೀಸಲಿಟ್ಟಿದ್ದೆ ಎಂದು ತಿಳಿಸಿದರು.

ಮೈಶುಗರ್ ಶಿಕ್ಷಣ ಸಂಸ್ಥೆ ಉಳಿಸಲು ನಾನು ಬದ್ಧನಾಗಿದ್ದೇನೆ. ಅದಕ್ಕೆ ಬೇಕಾದ ನೀಲನಕ್ಷೆ ಸಿದ್ಧಪಡಿಸಿಕೊಡಿ. ಮಾದರಿ ಶಾಲೆ ಮಾಡಲು ಅಗತ್ಯ ನೆರವು ನೀಡುತ್ತೇನೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಉಚಿತ ಇಂಗ್ಲಿಷ್ ಶಾಲೆ ತೆರೆಯಬೇಕು ಅಂತ ಯೋಚಿಸಿದ್ದೇನೆ. ಪಂಚ ಯೋಜನೆಗಳನ್ನು ಜಾರಿಗೆ ತರಬೇಕು ಅಂತ ನನ್ನ ಕನಸಿತ್ತು. ಇಂತಹ ದೊಡ್ಡ ಕಾರ್ಯಕ್ರಮ ಕೊಡುತ್ತಾನೆಯೇ? ಎಂದು ಜನರು ಅನುಮಾನ ವ್ಯಕ್ತಪಡಿಸಿದರು. ನನ್ನ ದುರಾದೃಷ್ಟ ಜನರಿಗೆ ನನ್ನ ಮೇಲೆ ವಿಶ್ವಾಸ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಡೆನೂರು ಮನು ಜೈಲಿನಿಂದ ರಿಲೀಸ್..! ಶಿವಣ್ಣ ಮತ್ತು ದರ್ಶನ್ ಬಗೆಗಿನ ಆಡಿಯೋ ನನ್ನದಲ್ಲ ಎಂದ ಮನು..!

ಬೆಂಗಳೂರಿನಲ್ಲಿ ಸೂಟ್‌ ಕೇಸ್‌ ನೊಳಗೆ ಬಾಲಕಿಯ ಶವ ಇಟ್ಟು ಎಸೆದಿದ್ದ ಆರೋಪಿಗಳು ಪತ್ತೆ..! ಬಿಹಾರದಲ್ಲಿ 7 ಮಂದಿಯ ಬಂಧನ..!

See also  ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಮಿನಿ ಬಸ್ ಅನ್ನು ಏರಿದ ಚಿರತೆ..! ಪ್ರವಾಸಿಗರಲ್ಲಿ ಆತಂಕ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget