ಕ್ರೈಂ

ತಾಯಿಯೇ ಮಗನ ಉಸಿರು ನಿಲ್ಲಿಸಿದ ಪ್ರಕರಣ;ಕಿತ್ತಾಡಿಕೊಂಡ ಗಂಡ-ಹೆಂಡ್ತಿ ಕಂಡು ಪೊಲೀಸರಿಗೆ ಶಾಕ್..!ವಿಚಾರಣೆ ಸಂದರ್ಭ ದಂಪತಿ ಹೇಳಿದ್ದೇನು?

250

ನ್ಯೂಸ್ ನಾಟೌಟ್:ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ತಾಯಿಯಿಂದಲೇ ಮಗನ ಉಸಿರು ಚೆಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ನಾಲ್ಕು ವರ್ಷದ ಮಗನನ್ನು ಮುಗಿಸಿದ ಆರೋಪಿ ಸುಚನಾ ಸೇಠ್ ಹಾಗೂ ಅವರಿಂದ ದೂರವಾಗಿರುವ ಪತಿಯನ್ನು ಪೊಲೀಸರು ಮುಖಾಮುಖಿಯಾಗಿಸಿದ್ದಾರೆ. ವಿಚ್ಛೇದನ ಹಾಗೂ ಕೌಟುಂಬಿಕ ಪ್ರಕರಣದಲ್ಲಿ ಕಾನೂನು ಸಮರ ನಡೆಸಿರುವ ದಂಪತಿ, ಗೋವಾದಲ್ಲಿ ವಿಚಾರಣೆ ಸಂದರ್ಭದಲ್ಲಿ ಎದುರುಗೊಂಡಿದ್ದಾರೆ.

ಈ ವೇಳೆ ಗೋವಾ ಪೊಲೀಸ್ ಠಾಣೆಗೆ ಆಗಮಿಸಿದ ಪತಿ ವೆಂಕಟ ರಮಣ್ ಮತ್ತು ಸುಚನಾ ಸೇಠ್ 15 ನಿಮಿಷಗಳ ಕಾಲ ಮುಖಾಮುಖಿಯಾದರು. ಆದರೆ ಇಡಿ ಸನ್ನಿವೇಶವು ಪರಸ್ಪರ ದೋಷಾರೋಪಣೆ ಹಾಗೂ ವಾಗ್ವಾದದ ಹೊರತಾಗಿ ಬೇರೇನೂ ಇರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾವೆ.ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಈ ಕೃತ್ಯ ನಡೆದಾಗ ಸುಚನಾ ಅವರ ಪತಿ ವೆಂಕಟ್ ರಮಣ್ ವಿದೇಶದಲ್ಲಿದ್ದರು. ಅಪ್ಪನನ್ನು ನೋಡಬೇಕು ಎಂದು ಮಗ ಬಯಕೆ ವ್ಯಕ್ತಪಡಿಸಿರಬಹುದು. ಇದನ್ನು ಸಹಿಸದ ಸುಚನಾ ಕೋಪದಿಂದ ಅವನನ್ನು ಮುಗಿಸಿರಬಹುದು ಎಂದು ವೆಂಕಟ್ ಹೇಳಿದ್ದಾರೆ.

ಸುಚನಾ ಮತ್ತು ವೆಂಕಟ್ ಅವರ ವಿಚ್ಛೇದನ ಪ್ರಕರಣದ ವಿಚಾರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿತ್ತು. ಮಗನನ್ನು ಭೇಟಿ ಮಾಡುವ ವಿಚಾರದಲ್ಲಿ ತಂದೆಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. 2022ರ ಆಗಸ್ಟ್ 18ರಂದು ಹೊರಡಿಸಿದ ಆದೇಶದಂತೆ ವೆಂಕಟ್ ಅವರು ಸುಚನಾ ವಾಸವಿರುವ ಮನೆಗೆ ಪ್ರವೇಶಿಸುವುದು ಅಥವಾ ಫೋನ್ ಅಥವಾ ಇತರೆ ಯಾವುದೇ ರೀತಿಯಲ್ಲಿ ಸಂಪರ್ಕಿಸುವುದನ್ನು ಮಾಡುವಂತಿರಲಿಲ್ಲ. ಆದರೆ, ವಾರಕ್ಕೆ ಒಂದು ದಿನ ತಮ್ಮ ಮಗನನ್ನು ಭೇಟಿ ಮಾಡುವ ಹಕ್ಕನ್ನು ವೆಂಕಟ್‌ಗೆ ಕೋರ್ಟ್ ನೀಡಿತ್ತು. ಇದು ಸುಚನಾಗೆ ಅಸಮಾಧಾನ ಮೂಡಿಸಿತ್ತು. ವೆಂಕಟ್ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು. ಈ ಆರೋಪಗಳನ್ನು ಕೋರ್ಟ್ ಮುಂದೆ ವೆಂಕಟ್ ನಿರಾಕರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಕೋರ್ಟ್ ಆದೇಶದ ನಡುವೆಯೂ ಮಗನನ್ನು ಭೇಟಿ ಮಾಡಲು ವೆಂಕಟ್‌ಗೆ ಸುಚನಾ ಅವಕಾಶ ನೀಡಿರಲಿಲ್ಲ. ಡಿ 10ರಂದು ಮಗನನ್ನು ಅವರು ನೋಡಿದ್ದೇ ಕೊನೆಯ ಸಲವಾಗಿತ್ತು. ಶನಿವಾರ ಚಿಕ್ಕ ಅವಧಿಯ ಭೇಟಿಯಲ್ಲಿ ನಡೆದ ಅವಘಡಗಳಿಗೆ ನೀನೇ ಕಾರಣ ಎಂದು ಇಬ್ಬರೂ ಪರಸ್ಪರ ದೂಷಿಸಿಕೊಂಡಿದ್ದಾರೆ. ಮಗುವಿನ ಈ ಪ್ರಕರಣದ ಬಗ್ಗೆ ವೆಂಕಟ್ ಪ್ರಶ್ನಿಸಿದಾಗ, ಮಗನ ದುರಂತ ಅಂತ್ಯದ ಕುರಿತು ತಮಗೆ ಏನೂ ಗೊತ್ತಿಲ್ಲ ಎಂದು ಸುಚನಾ ಹೇಳಿದ್ದಾರೆ. ವೆಂಕಟ್ ಜತೆಗಿನ ಮಾತುಕತೆ ವೇಳೆ, ಪೊಲೀಸರಿಗೆ ಕೊಟ್ಟ ರೀತಿಯ ಹೇಳಿಕೆಗಳನ್ನೇ ಸುಚನಾ ಪುನರುಚ್ಚರಿಸಿದ್ದಾರೆ. ಗೋವಾ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ತಾವು ಮಲಗಿದ್ದಾಗ ಮಗು ಎಚ್ಚರವಾಗಿತ್ತು. ಆದರೆ ಎದ್ದಾಗ ಮಗು ಉಸಿರು ಚೆಲ್ಲಿತ್ತು ಎಂದು ಸುಚನಾ ಹೇಳಿಕೆ ನೀಡಿದ್ದರು.

See also  ಎರಡೂ ಕೂಡ ಹೆಣ್ಣು ಮಕ್ಕಳೇ ಎಂದು ಮಾರಲು ಹೊರಟ ತಂದೆ..! ರಕ್ಷಿಸಲು ಬಂದವರೇ ಜೈಲು ಸೇರಿದ್ದೇಕೆ..?

ಕಳೆದ ಐದು ಭಾನುವಾರಗಳಿಂದ ಮಗನನ್ನು ಭೇಟಿ ಮಾಡಿಸಲು ಸುಚನಾ ನಿರಾಕರಿಸಿದ್ದರು. ಜ. 6ರಂದು ಬೆಂಗಳೂರಿನಲ್ಲಿ ಮಗನನ್ನು ಕರೆದೊಯ್ಯುವಂತೆ ಸುಚನಾ ಹೇಳಿದ್ದರೂ, ಹೇಳಿದ ಜಾಗಕ್ಕೆ ಅವರೇ ಬಂದಿರಲಿಲ್ಲ. ಗೋವಾಕ್ಕೆ ಮಗನನ್ನು ಕರೆದೊಯ್ದ ಸಂಗತಿ ತಮಗೆ ಗೊತ್ತಿರಲಿಲ್ಲ. ಸುಮಾರು ಒಂದು ಗಂಟೆ ಅಲ್ಲಿ ಕಾದು, ವಾಟ್ಸಾಪ್ ಸಂದೇಶ ಹಾಗೂ ಇಮೇಲ್ ಕಳುಹಿಸಿದ್ದಾಗಿ ವೆಂಕಟ್ ಹೇಳಿದ್ದಾರೆ.

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget