ದೇಶ-ಪ್ರಪಂಚ

ಕೇವಲ 29 ರೂ.ಗೆ ಸಿಗಲಿದೆ ಒಂದು ಕೆಜಿ ಭಾರತ್ ಬ್ರ್ಯಾಂಡ್‌ನ ಅಕ್ಕಿ..! ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ..!

ನ್ಯೂಸ್ ನಾಟೌಟ್:ತರಕಾರಿ, ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ.ಬಡವರ ಪಾಲಿಗೆ ಜೀವನವೇ ಕಷ್ಟವಾಗಿ ಪರಿಣಮಿಸಿದೆ.ರಾಜ್ಯ ಸರಕಾರ ಅಕ್ಕಿಯನ್ನು ಬಡವರಿಗೆ ನೀಡುತ್ತಿದೆ.ಈ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಮಾರಾಟ ಮಾಡಲು ತೀರ್ಮಾನಿಸಿರುವ ಭಾರತ್ ಬ್ರ್ಯಾಂಡ್‌‌ ಅಕ್ಕಿಗೆ ಇಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ.

ಒಂದು ಕೆಜಿ ಭಾರತ್ ಬ್ರ್ಯಾಂಡ್​ ಅಕ್ಕಿಗೆ 29 ರೂ.ದರ ನಿಗದಿ ಮಾಡಲಾಗಿದೆ.ದೇಶದ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಪೌಷ್ಠಿಕ ಅಹಾರ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳ ಬೆಲೆ ಹೆಚ್ಚುತ್ತಿದೆ. ಬೆಲೆ ಏರಿಕೆಯ ಬಿಸಿ ಬಡವರನ್ನು ಅತ್ಯಂತ ಹೆಚ್ಚಾಗಿ ತಟ್ಟಲಾರಂಭಿಸಿದೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎನ್ನುವ ಮಾಹಿತಿಯಿದೆ.ಸದ್ಯ ದೇಶದ ಜನರು ಹಣದುಬ್ಬರತೆಯ ಪರಿಸ್ಥಿಯನ್ನು ತಡೆಗಟ್ಟುವ ಸಲುವಾಗಿ ತೆಗೆದುಕೊಂಡಿರುವ ನಿರ್ಧಾರ ಜನರ ಮೆಚ್ಚುಗೆ ಗಳಿಸಿದೆ.

ಇನ್ನು ಈ ಅಕ್ಕಿ ರಿಲಯನ್ಸ್​​, ಫ್ಲಿಪ್​​ಕಾರ್ಟ್​, ಬಿಗ್​ ಬಾಸ್ಕೆಟ್​ ಅಷ್ಟೇ ಅಲ್ಲದೆ ಆನ್​ಲೈನ್​ನಲ್ಲೂ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿ ಮಾಡಬಹುದು. ಇನ್ನೊಂದು ವಾರದಲ್ಲಿ ಇತರೆ ಸ್ಟೋರ್​ಗಳಲ್ಲೂ ಭಾರತ್ ಅಕ್ಕಿ ಲಭ್ಯವಾಗಲಿದೆ ಅನ್ನುವ ಮಾಹಿತಿಯಿದೆ.

Related posts

ಅಮೆರಿಕಾಕ್ಕೆ ಅಕ್ರಮ ಪ್ರವೇಶಕ್ಕೆ ಯತ್ನ! ನದಿಯಲ್ಲಿ ಮುಳುಗಿ ಭಾರತೀಯರ ಸಾವು!

ಹರಾಜಿನಲ್ಲಿ ಬರೋಬ್ಬರಿ 56 ಲಕ್ಷ ರೂ.ಗೆ ಮಾರಾಟವಾದ 100ರೂ. ನೋಟು..! ಏನಿದರ ವಿಶೇಷತೆ..?

ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ 1,000 ಜನ ಸಾವು..! ಮಲ್ಲಿಕಾರ್ಜುನ ಖರ್ಗೆ ಶಾಕಿಂಗ್ ಹೇಳಿಕೆ..!