ಬೆಂಗಳೂರು

ಬೆಂಗಳೂರಿನಲ್ಲಿ ಕುಸಿದು ಬಿದ್ದ ಮತ್ತೊಂದು ಮೂರು ಅಂತಸ್ತಿನ ಕಟ್ಟಡ

ಬೆಂಗಳೂರು: ಉದ್ಯಾನನಗರಿಯಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಮಂಗಳವಾರ ಬೆಳಗ್ಗೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಡೇರಿ ವೃತ್ತದಲ್ಲಿನ ಕೆಎಂಎಫ್ ಆವರಣದಲ್ಲಿರುವ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಈ ಕಟ್ಟಡ, ನೌಕರರ ಕ್ವಾರ್ಟರ್ಸ್ ಆಗಿತ್ತು.  ಶಿಥಿಲವಾಗಿದ್ದರಿಂದ ಹಲವು ತಿಂಗಳ ಹಿಂದೆಯೇ ಎಲ್ಲರನ್ನೂ ಕಟ್ಟಡದಿಂದ ಖಾಲಿ ಮಾಡಿಸಲಾಗಿತ್ತು. ಕಟ್ಟಡದಲ್ಲಿ ‌ಯಾರೂ ವಾಸವಿರಲಿಲ್ಲ. ಮಂಗಳವಾರ ನಿಧಾನವಾಗಿ ವಾಲಿದ ಕಟ್ಟಡ, ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.

Related posts

Gruha lakshmi Scheme:ತಾಯಂದಿರಲ್ಲಿ ನೆಮ್ಮದಿಯ ನಗೆ ಕಾಣಲು ಉತ್ಸುಕನಾಗಿದ್ದೇನೆ-ಸಿ.ಎಂ.ಸಿದ್ದು ಭಾವುಕ ನುಡಿ

‘ಜಗ್ಗೇಶ್ ಚಪ್ಪಲಿಗೂ ನಾವು ಸಮ ಇಲ್ಲ’ಎಂದದ್ದೇಕೆ ಡ್ರೋನ್ ಪ್ರತಾಪ್ ತಂದೆ..? ತಂದೆ – ತಾಯಿಯ ನಂಬರ್ ಬ್ಲಾಕ್ ಮಾಡಿದ ಬಗ್ಗೆ ಪ್ರತಾಪ್ ತಂದೆ ಹೇಳಿದ್ದೇನು?

ಬೀದಿ ನಾಯಿಗಳಿಗೆ ಆಹಾರ ನೀಡುವುದಕ್ಕೂ ಮಾರ್ಗಸೂಚಿ ಬಿಡುಗಡೆ..! ಇಲ್ಲಿದೆ ಸಂಪೂರ್ಣ ಮಾಹಿತಿ