ಬೆಂಗಳೂರು

ಸ್ಕೂಟಿಯಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆಯೇ ಹರಿದ ಬಿಎಂಟಿಸಿ ಬಸ್‌..!ಬಾಯ್‌ ಎಂದು ಮನೆಯಿಂದ ಕಾಲೇಜಿಗೆ ಹೊರಟಿದ್ದ ಯುವತಿ ಕೊನೆಯುಸಿರು..!

ನ್ಯೂಸ್‌ ನಾಟೌಟ್‌ :ಬೆಂಗಳೂರಿನಲ್ಲಿ ದಿನೇ ದಿನೇ ಅಪಘಾತ ಪ್ರಕರಣಗಳು ವರದಿಯಾಗುತ್ತಲೇ ಇದೆ.ಅದರಲ್ಲೂ ಬಿಎಂಟಿಸಿಗೆ ಗುರಿಯಾಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಇದೀಗ ನಗರದ ಮಲ್ಲೇಶ್ವರಂನ ಹರಿಶ್ಚಂದ್ರ ಘಾಟ್ ಬಳಿಯ ರಸ್ತೆಯಲ್ಲಿ ಈ ದುರಂತವೊಂದು ಸಂಭವಿಸಿದ್ದು ಯುವತಿಯೊಬ್ಬಳು ಬಾರದ ಲೋಕಕ್ಕೆ ತೆರಳಿದ್ದಾಳೆ.

ಹೌದು, ಮಲ್ಲೇಶ್ವರಂ ನಿವಾಸಿ ಆಗಿರುವ ಕು|ಸುಮಿತಾ ಉಸಿರು ಚೆಲ್ಲಿದ ಅಮಾಯಕಿ. ಕೆಂಗೇರಿ ಬಳಿಯಿರುವ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ಲು. ಎಂದಿನಂತೆ ಇಂದು ಬೆಳಗ್ಗೆ ರೆಡಿಯಾಗಿ ಕಾಲೇಜಿಗೆ ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ಲು. ಹರಿಶ್ಚಂದ್ರ ಘಾಟ್ ಬಳಿ ಹೋಗುವಾಗ ವೇಗವಾಗಿ ಬಂದ ಬಿಎಂಟಿಸಿ ಬಸ್ ಕು|ಸುಮಿತಾಳ ಬೈಕ್ ಗೆ ಸೈಡ್ ನಿಂದ ಡಿಕ್ಕಿ ಹೊಡೆದಿದೆ.ಪರಿಣಾಮ ಆಕೆ ಪ್ರಾಣ ಚೆಲ್ಲಿದ್ದಾಳೆ.  

ಈ ವೇಳೆ ಬ್ಯಾಲೆನ್ಸ್ ಕಳೆದು ಕೊಂಡಿದ್ದಾಳೆ. ಇದನ್ನ ಗಮನಿಸದ ಚಾಲಕ ಬಸ್ ಹಿಂಬದಿ ಚಕ್ರವನ್ನ ಯುವತಿಯ ಮೇಲೆ ಹತ್ತಿಸಿದ್ದಾನೆ. ತಕ್ಷಣ ಎಚ್ಚೆತ್ತ ಸಾರ್ವಜನಿಕರು ಬಸ್ ನಿಲ್ಲಿಸುವಂತೆ ತಡೆದಿದ್ದಾರೆ. ಅಷ್ಟರಲ್ಲಾಗಲೇ ಬಸ್ ವಿದ್ಯಾರ್ಥಿನಿಯ ಮೇಲೆ ಹರಿದುಬಿಟ್ಟಿತ್ತು. ಘಟನೆ ಗೊತ್ತಾದ ಬೆನ್ನಲ್ಲೆ ಕು|ಸುಮಿತಾ ಪೊಷಕರು ಓಡೊಡಿ ಬಂದಿದ್ದಾರೆ. ಅಗಷ್ಟೇ ಅಪ್ಪ ಅಮ್ಮನಿಗೆ ಬಾಯ್ ಹೇಳಿ ಬಂದವರು ಉಸಿರು ನಿಲ್ಲಿಸಿದ್ದಾಳೆ ಅನ್ನೊದನ್ನು ಕೇಳಿ ದಿಕ್ಕುತೋಚದೆ ಮುಗಿಲು ಮುಟ್ಟುವಂತೆ ಆಕ್ರಂದಿಸಿದ್ದಾರೆ.

Related posts

ದೀಪಾವಳಿಗೆ ಮಾಜಿ ಸಿಎಂ ಎಚ್.​ಡಿ. ಕುಮಾರಸ್ವಾಮಿ ಮನೆಗೆ ಬಿಟ್ಟಿ ವಿದ್ಯುತ್‌ ಪಡೆದ್ರಾ..?, ಕಾಂಗ್ರೆಸ್‌ ಆರೋಪಕ್ಕೆ ಎಚ್‌ಡಿಕೆ ಹೇಳಿದ್ದೇನು..?

ಕಾಡು ಆನೆಗಳು ಸೂಕ್ಷ್ಮ, ಕೆಲವು ಸಲ ಮನುಷ್ಯ ಮುಟ್ಟಿದ್ರೂ ಮರಿಗಳನ್ನು ಸ್ವೀಕರಿಸಲ್ಲ..!

ಮಹಡಿ ಮೇಲಿಂದ ಬಿದ್ದು 9ನೇ ತರಗತಿ ವಿದ್ಯಾರ್ಥಿನಿ ದಾರುಣ ಸಾವು!