Latestಕ್ರೈಂಬೆಂಗಳೂರುವೈರಲ್ ನ್ಯೂಸ್

ಬೆಂಗಳೂರಿನ ಅಪಾರ್ಟ್​​ಮೆಂಟ್ ನ ಒಳಚರಂಡಿಯಲ್ಲಿ ನಿಗೂಢ ತಲೆಬುರುಡೆ, ಅಸ್ತಿಪಂಜರ ಪತ್ತೆ..!ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ ಪೊಲೀಸರು..!

320

ನ್ಯೂಸ್ ನಾಟೌಟ್: ಬೆಂಗಳೂರಿನ ಬೇಗೂರಿನಲ್ಲಿ ಇರುವ ಅಪಾರ್ಟ್​​ಮೆಂಟ್ ​​ವೊಂದರ ಒಳಚರಂಡಿಯಲ್ಲಿ ತಲೆಬುರುಡೆ, ಅಸ್ತಿಪಂಜರ, ಮೂಳೆ ಸೇರಿದಂತೆ ಹಲವು ಭಾಗಗಳು ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಆಗ್ನೇಯ ಬೆಂಗಳೂರಿನ ಎಂಎನ್ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ನಡೆದಿದೆ.

ಶೌಚಗುಂಡಿ ಸ್ವಚ್ಚಗೊಳಿಸುವಾಗ ಕಾರ್ಮಿಕರಿಗೆ ಇವೆಲ್ಲಾ ಸಿಕ್ಕಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಜೂನ್ 16 ರಂದು ಗುತ್ತಿಗೆ ಕಾರ್ಮಿಕರು ಕಾರು ನಿಲ್ದಾಣದ ಬಳಿಯ ಒಳಚರಂಡಿ ಗುಂಡಿಯನ್ನು ತೆರವುಗೊಳಿಸುತ್ತಿದ್ದಾಗ ಮೂಳೆಗಳು ಕಂಡುಬಂದವು ಎನ್ನಲಾಗಿದೆ. ಇದರಲ್ಲಿ ತಲೆಬುರುಡೆಯ ತುಣುಕುಗಳು ಸೇರಿವೆ ಎಂದು ಭಾವಿಸಲಾಗಿದೆ.

ಅವರು ತಕ್ಷಣ ನಿವಾಸಿಗಳ ಕಲ್ಯಾಣ ಸಂಘದ (ಆರ್‌ಡಬ್ಲ್ಯೂಎ) ಮುಖ್ಯಸ್ಥರಿಗೆ ಮಾಹಿತಿ ನೀಡಿದರು, ನಂತರ ಅವರು ಪೊಲೀಸರನ್ನು ಸಂಪರ್ಕಿಸಿದರು ಎಂದು ತಿಳಿದುಬಂದಿದೆ. ಪೊಲೀಸರು ಸದ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿದ್ದಾರೆ. ವರದಿಯ ಬಳಿಕ ಇದು ಯಾರದ್ದು ಎನ್ನುವ ಸ್ಪಷ್ಪತೆ ಸಿಗಲಿದೆ. ಮೂಳೆಗಳನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 56 ಪೊಲೀಸ್ ಸಿಬ್ಬಂದಿಯ ವರ್ಗಾವಣೆ..! ಇಲ್ಲಿದೆ ಸಂಪೂರ್ಣ ಮಾಹಿತಿ

See also  ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡ ರಿಷಬ್‌ ಶೆಟ್ಟಿ..! ಕಾಂತಾರದ ನಟನಿಗೆ ಫುಲ್ ಡಿಮ್ಯಾಂಡ್
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget