ಬೆಂಗಳೂರು

ಫೆ.13ರಿಂದ ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ಹಾರಾಟ

333

ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಫೆ.13ರಿಂದ ಐದು ದಿನಗಳ ಕಾಲ ವಿಮಾನ ಪ್ರದರ್ಶನ ನಡೆಯಲಿದೆ. ಏಷ್ಯಾದ ಅತೀ ದೊಡ್ಡ ಏರ್ ಶೋ ‘ಏರೋಇಂಡಿಯಾ’ ಇದು ಪ್ರತಿ 2 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. 2021ರಲ್ಲಿ ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮ ಕೇವಲ 3 ದಿನಗಳ ಕಾಲ ಮಾತ್ರ ನಡೆದಿತ್ತು. ಆದರೆ ಈ ಬಾರಿ ಐದು ದಿನಗಳ ಕಾಲ ವಿಮಾನವು ಹಾರಲಿದೆ.

ಮೊದಲ 3 ದಿನದ ಏರ್‌ಶೋ ಅನ್ನು ವ್ಯಾಪಾರಿ ಸಂದರ್ಶಕರಿಗಾಗಿ ಕಾಯ್ದಿರಿಸಲಾಗಿದೆ. ಅದೇ ಕೊನೆಯ 2 ದಿನಗಳ ಶೋ ಸಾರ್ವಜನಿಕರಿಗಾಗಿ ತೆರೆದಿರಲಿದೆ. ಏರೋ ಇಂಡಿಯಾ 2018ರಿಂದಲೂ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (ಎಚ್ ಎಎಲ್) ಆಯೋಜನೆ ಮಾಡುತ್ತಲೇ ಬಂದಿದೆ. ಈ ಬಾರಿಯು 2023 ಏರ್ ಶೋ ವನ್ನು ಎಚ್‌ಎಎಲ್ ಆಯೋಜನೆ ಮಾಡಲಿದೆ. 1990ರಿಂದಲೂ ಯಲಹಂಕದ ವಾಯುಪಡೆ ನೆಲೆಯಲ್ಲಿ ನಡೆಯುತ್ತಲೇ ಬಂದಿದೆ. ಕೋಡ್ ನಂತರ ಭಾರೀ ಸಂಖ್ಯೆಯಲ್ಲಿ ಭಾರತೀಯ ಹಾಗೂ ವಿದೇಶಿ ಪ್ರದರ್ಶಕರು ವಿಮಾನಗಳ ಪ್ರದರ್ಶನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

See also  ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸೇರಿದಂತೆ 65 ಮಂದಿಗೆ ಸಮನ್ಸ್ ಜಾರಿ, ಅಷ್ಟಕ್ಕೂ ನ್ಯಾಯಾಲಯ ಈ ಸಮನ್ಸ್ ನೀಡಿದ್ದೇಕೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget